ಬಹಿರಂಗ

ಸಂವಿಧಾನ ಬದಲಾವಣೆ ಎಂದರೆ….

Published

on

 

ಗಮನಿಸಿ,

ಸಂವಿಧಾನವನ್ನ ನಾನು ಒಪ್ಪಲ್ಲ..!
ಸಂವಿಧಾನದಲ್ಲಿ ನಮ್ಮ ಪರಂಪರೆ ಇಲ್ಲ..!
ಸಂವಿಧಾನವನ್ನ ಬದಲಾಯಿಸುತ್ತೇವೆ..!
ಸಂವಿಧಾನವನ್ನು ಬದಲಾಯಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ!
ಸಂವಿಧಾನವೇ ಎಲ್ಲವೂ ಅಲ್ಲ..!
ಸಂವಿಧಾನವನ್ನು ಸುಡುತ್ತೇವೆ..!
ಸಂವಿಧಾನಕ್ಕೆ ಧಿಕ್ಕಾರ..!
ಸಂವಿಧಾನ ಸರಿಯಿಲ್ಲ….,!
ಸಂವಿಧಾನದ ಪ್ರಕಾರ ಇನ್ನು ಚುನಾವಣೆ ನಡೆಯಲ್ಲ..!

-ಹೀಗೆ ಕಳೆದ ನಾಲ್ಕೈದು ವರ್ಷಗಳಲ್ಲಿ ನಿರಂತರವಾಗಿ ಒಂದೇ ಧಾಟಿಯಲ್ಲಿ ನಮ್ಮೆಲ್ಲರ ಹೆಮ್ಮೆಯ ಭಾರತೀಯ ಸಂವಿಧಾನದ ಬಗ್ಗೆ ಅಸಹಿಷ್ಣುತೆಯಿಂದ ಲಘುವಾಗಿ ಹೇಳಿಕೆ ಕೊಟ್ಟುಕೊಂಡು ಬಂದವರೆಲ್ಲಾ ದೇಶದ ಜನಸಂಖ್ಯೆಯಲ್ಲಿ ಕೇವಲ ಮೂರು ಪರ್ಸೆಂಟ್ ಗೂ ಕಡಿಮೆ ಇರುವ ಒಂದೇ ಜಾತಿಗೆ (ಬ್ರಾಹ್ಮಣ ಪುರುಷ ಜಾತಿಗೆ) ಒಂದೇ ಪಕ್ಷಕ್ಕೆ ಸೇರಿದ (ಬಿಜೆಪಿ) ಸೇರಿದವರೇ ಆಗಿದ್ದಾರೆ‌..!

ಪಾಪ, ಸಮಾನತಾ ಸಂವಿಧಾನದ ಬಗೆಗಿನ ಈ ಜಾತಿಜನರ ಅಸಹಿಷ್ಣುತೆಗೆ ಕಾರಣವಿದೆ. ಅದೇನೆಂದರೆ ಎರಡೂವರೆ ಸಾವಿರ ವರ್ಷಗಳ ಕಾಲ ಈ ಜನರು ಮೂಲಭಾರತೀಯರಿಗೆ ಶಿಕ್ಷಣವನ್ನು ನಿಷೇಧಿಸಿ ಕೇವಲ ತಾವು ಮಾತ್ರವೇ ವಿದ್ಯೆಯ ಗುತ್ತಿಗೆ ಪಡೆದು ಸರ್ವ ಅಬ್ರಾಹ್ಮಣರನ್ನು ಅಕ್ಷರಶಃ ಗುಲಾಮರನ್ನಾಗಿಸಿದ್ದ ವ್ಯವಸ್ಥೆಯನ್ನು ಒಂದೇ ಏಟಿಗೆ ಛಿದ್ರಗೊಳಿಸಿ ಸರ್ವ ಜಾತಿ ಧರ್ಮ ಲಿಂಗದವರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೊಳಿಸಿದ್ದು ಈ ನಮ್ಮ ಭಾರತೀಯ ಸಂವಿಧಾನ..!! ಅದಕ್ಕೇ ಅವರಿಗೆ ಈ ನಮ್ಮ ಸಂವಿಧಾನದ ಬಗ್ಗೆ ಅಷ್ಟು ಅಸೂಯೆ ಅಸಹನೆ…!!

ಇನ್ನು ಆರು ಸಾವಿರ ಅಬ್ರಾಹ್ಮಣ ಜಾತಿಗಳವರಿಗೆ (ಅಂದರೆ OBC,ST,SC,RM, ಮತ್ತು ಮಹಿಳೆ) ಒಂದೊಂದು ಕಸುಬನ್ನು ಹೇರಿ ಹೊಟ್ಟೆ ತುಂಬಿಸಿಕೊಳ್ಳಲು ಆ ಕೆಲಸವನ್ನು ಮಾತ್ರವೇ ಮಾಡಬೇಕು ಅದು ಇಚ್ಛೆಯಿಲ್ಲದಿರಲಿ, ಕಡಿಮೆ ಆದಾಯವಿರಲಿ, ಕಷ್ಟವಿರಲಿ ,ಅಥವಾ ಅಸಹ್ಯದ್ದಿರಲಿ ಜಾತಿಗೆ ವಹಿಸಿದ ಅದೇ ಕೆಲಸವನ್ನು ಮಾಡುವುದು ಕಡ್ಡಾಯ..!

ಅದು ಶಾಸ್ತ್ರ, ಅದೇ ಸಂದ್ರದಾಯ ಎಂದು ಹೇಳಿ ಜಾತಿಗೊಂದು ಕಸುಬು ಅಂಟಿಸಿ ದೇವರ ಹೆಸರಿನಲ್ಲಿ ಎಲ್ಲರನ್ನು ಹೆದರಿಸಿ ಬೆದರಿಸಿ ತಾವು ಮಾತ್ರ ನೆರಳಲ್ಲಿ ಕೂತು ಎಲ್ಲ ಜನಾಂಗದವರ ಶ್ರಮದ ಬೆವರನ್ನು ನಿರಾಯಾಸವಾಗಿ ಉಣ್ಣುತ್ತಾ ಹೆಣ್ಣನ್ನು ಭೋಗದ ವಸ್ತುಮಾಡಿ ಶೋಷಿಸುತ್ತಾ ಸರಸವಾಡುತ್ತಾ ಬೇಡವೆಂದಾಗ ಬೆಂಕಿಗೆ ಹಾಕಿ ವಿಕೃತಿ ಮೆರೆಯುತ್ತಾ ಅದಕ್ಕೆಲ್ಲಾ ಶಾಸ್ತ್ರ ಸಂಪ್ರದಾಯನೆಪದ ಲೇಪನ ಬಳಿದು ಅನೈತಿಕವಾಗಿ ಸ್ವೇಚ್ಛೆಯಿಂದ ಬದುಕುತ್ತಿದ್ದರೂ ಸಹ ಸಮಾಜದಲ್ಲಿ ಅತಿ ಉನ್ನತ ಗೌರವ ಪಡೆಯುತ್ತಾ ಪರಂಪರಾಗತವಾಗಿ ಎಲ್ಲರ ಮೆದುಳನ್ನು ಆಳುವ ಪುರೋಹಿತರಾಗಿ ಭೂಮಿಯ ಒಡೆಯರಾಗಿ ದೇಶದ ಮಂತ್ರಿ ದೊರೆಗಳಾಗಿ ಆರಾಮಾಗಿದ್ದವರು ಇಂದು ಇಂದು ಈ ಸಂವಿಧಾನದ ಕಾರಣಕ್ಕಾಗಿ ಆಗಿರುವ ಬದಲಾವಣೆಯನ್ನು ಅವರಿಂದ ಸಹಿಲಾಗುತ್ತಿಲ್ಲ.!

ಇಂದಿನ ಸಂವಿಧಾನದ ಪ್ರತಿಫಲವಾಗಿ ಈಗ ಬ್ರಾಹ್ಮಣರಲ್ಲದ ಲಿಂಗಾಯತ ಒಕ್ಕಲಿಗ ಗೌಡ ಕುರುಬ ಕುಂಬಾರ ಅಗಸ ಉಪ್ಪಾರ ಗೊಲ್ಲ ರೆಡ್ಡಿ ನಾಯ್ಡು ಬಲಿಜ ಗಾಣಿಗ ಈಡಿಗರು ಭೋವಿ ವಡ್ಡ ನಾಯಕ ವಾಲ್ಮೀಕಿ ತಳವಾರ ಲಂಬಾಣಿ ಮಾದಿಗ ಹೊಲಯರು ಮುಸಲ್ಮಾನರು ಕ್ರೈಸ್ತರು ಹಾಗು ಎಲ್ಲಾ ಜಾತಿಧರ್ಮದ ಮಹಿಳೆಯರು ಈಗ- ಶಿಕ್ಷಕ ಉಪನ್ಯಾಸಕ ಪ್ರೊಫೆಸರ್ ಗಳಾಗುತ್ತಾರೆ ಡಾಕ್ಟರ್ ಇಂಜಿನಿಯರ್ ಆಫಿಸರ್ ಗಳಾಗುತ್ತಾರೆ ಸಿನಿಮಾ ಕ್ರೀಡೆ ಇತರೆಲ್ಲಾ ಕ್ಷೇತ್ರಗಳಲ್ಲಿ‌ಯೂ ಸಾಧಕರಾಗುತ್ತಿದ್ದಾರೆ.

ಹೆಣ್ಣು ಗಂಡಿನ ಸಮಕ್ಕೆ ಅಥವಾ ಆತನನ್ನೂ ಮೀರಿ ಬೆಳೆಯುತ್ತಿದ್ದಾಳೆ ಎಲ್ಲಾ ಜಾತಿಧರ್ಮದವರೂ ಭೂಮಿಯ ಒಡೆಯರಾಗಿದ್ದಾರೆ ಅಧಿಕಾರದಲ್ಲಿ ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳಾಗಿ ದೇಶ ಆಳುತ್ತಿದ್ದಾರೆ…!! ಹಾಗಾಗಿಯೇ ಈ ಭಾರತೀಯ ಸಮಾನತಾ ಸಂವಿಧಾನವನ್ನು ಕಂಡರೆ ಈ ಜಾತಿವಾದಿ ಕೋಮುವಾದಿ ಹಲವು ಬ್ರಾಹ್ಮಣ ಪುರುಷರಿಗೆ ಆಗುವುದಿಲ್ಲ..!! ಹೀಗೆ ಇವರು ಭಾರತದ ಸಂವಿಧಾನವನ್ನು ದೂಷಿಸಲು ದ್ವೇಷಿಸಲು ಇನ್ನೂ ಸಾವಿರ ಸಾವಿರ ಕಾರಣಗಳಿವೆ..!!

ಆದರೆ, ಇಂದು ಸದಾ ಅನ್ಯಜಾತಿಧರ್ಮೀರ ಬಗ್ಗೆ ದ್ವೇಷ ಉಗುಳುತ್ತಾ ಪದೇ ಪದೇ ಅಸಹಿಷ್ಣುತೆಯಿಂದ ಮಾತಾಡುವ ಅದೇ ಪಕ್ಷದ ಅಬ್ರಾಹ್ಮಣ ಶೂದ್ರನಾದ ಬಸವರಾಜ್ ಯತ್ನಾಳ್ ಎಂಬ ವ್ಯಕ್ತಿಯ ಬಾಯಿಯಿಂದಲೂ ಸಂವಿಧಾನ ಬದಲಾಯಿಸುವ ಮಾತುಗಳು ಬಂದಿವೆ..!! ಇದು ಬಹಳ ಅಪಾಯಕಾರಿ ಬೆಳವಣಿಗೆ..!! ಯಾಕೆಂದರೆ ಸಂವಿಧಾನ ಬದಲಾವಣೆಯೆಂದರೆ ಯತ್ನಾಳನೂ ಸೇರಿದಂತೆ ಎಲ್ಲಾ ಅಬ್ರಾಹ್ಮಣರ ಸರ್ವನಾಶವೆಂದೇ ಅರ್ಥ..! ಅದನ್ನು ಆತನಿಗೆ ಅರ್ಥ ಮಾಡಿಸಬೇಕು…!

ಅವರು ಸಂವಿಧಾನವನ್ನು ಬದಲಾಯಿಸಲು ಯತ್ನಿಸುವುದು ನಾವು ನೀವು ಅದನ್ನು ತಡೆಯಲು ಹೋರಾಡುವುದು ಇವೆಲ್ಲವೂ ಒತ್ತಟ್ಟಿಗಿರಲಿ, ಆದರೆ ಸಂವಿಧಾನವನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಉಡಾಫೆಯ ಮಾತಾಡಿಕೊಂಡು ಬೇಜವಾಬ್ದಾರಿ ಮೆರೆಯದೆ ಸಂವಿಧಾನವನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಸಂವಿಧಾನವು ಸರ್ವಜಾತಿಧರ್ಮದ ಸರ್ವ ಲಿಂಗದವರ ಬದುಕಿಗೆ ನೇರವಾಗಿ ಸಂಬಂಧವಿರುವ ನಮ್ಮ ರಕ್ಷಕ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ..!

ಯಾಕೆಂದರೆ, ಸಂವಿಧಾನ ಬದಲಾವಣೆಯೆಂದರೆ ಇರುವ 395 ಪರಿಚ್ಛೇದಗಳನ್ನು ಏಕ್ದಂ ಬದಲಾಯಿಸಿ ಹೊಸದನ್ನು ತರುವುದೆಂದರ್ಥವಲ್ಲ.. ಸಂವಿಧಾನ ಬದಲಾವಣೆಯೆಂದರೆ ಮೊದಲು ಸ್ಪೃಶ್ಯರ ಒಪ್ಪಿಗೆ ಮತ್ತು ಸಹಕಾರ ಪಡೆದು ಅಸ್ಪೃಶ್ಯರನ್ನು ಮುಗಿಸುವುದು..! ನಂತರ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿ ಕ್ರೈಸ್ತರ ರೆಕ್ಕೆ ಕತ್ತರಿಸಿ ಮುಗಿಸುವುದು ಅವರ ನಂತರ ST ಗಳನ್ನು ಬಳಸಿಕೊಂಡು ಸ್ಪೃಶ್ಯರನ್ನು ಮುಗಿಸುವುದು ಮುಂದೆ OBC ಗಳನ್ನು ಬಳಸಿಕೊಂಡು ST ಗಳನ್ನು ಮಟ್ಟಹಾಕುವುದು ಕೊನೆಗೆ ಖುದ್ದು ತಾವೇ ನಿಂತು ತಮ್ಮ ಸಮುದಾಯದ ಪ್ರಗತಿಪರರನ್ನು ಮತ್ತು ಇತರೆ OBCಗಳನ್ನು ಸಂಪ್ರದಾಯದ ಹೆಸರಿನಲ್ಲಿ ಮುಗಿಸುವುದು.. ಕೊನೆಗೆ ತಾನೂ ಸರ್ವನಾಶವಾಗುವುದು…!!! ಇದು ಇದರ Process..!!!

ಈಗಾಗಲೇ ಇದು ಆರಂಭವಾಗಿದೆ..!! ಖಾಸಗೀಕರಣ, ಜಾಗತೀಕರಣ ,ಉದಾರೀಕರಣ ,ಒಳಮೀಸಲಾತಿ, ಹಿಂಬಡ್ತಿ ಮೂಲಕ ಉದ್ಯೋಗ ಕಿತ್ತುಕೊಳ್ಳುತ್ತಿರುವುದು ಅಟ್ರಾಸಿಟಿ ಆಕ್ಟ್ ಅನ್ನು ನಿರ್ವೀರ್ಯಗೊಳಿಸಿ ಪಿಟಿಸಿಎಲ್ ಆಕ್ಟ್ ಮೂಲಕ ಭೂಮಿಕಿತ್ತುಕೊಳ್ಳುತ್ತಿರುವುದು ಬುದ್ಧಿಜೀವಿಗಳ ಮೇಲೆ ಮತ್ತು ಅನ್ಯಧರ್ಮದವರ ಮೇಲೆ ದೇಶದ್ರೋಹದ ಕೇಸ್ ದಾಖಲೆ, ಬಹುಜನ ಸಮಾಜದದವರಿಗೆ IT ರೈಡ್ ಶಾಕ್, ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಸರ್ಕಾರಿ ಸಂಸ್ಥೆಗಳು ಮುಚ್ಚುತ್ತಿರುವುದು, ರಾಜಕಾರಣಿಗಳಿಗೆ ಕ್ಲೀನ್ ಚಿಟ್, ನ್ಯಾಯಾಧೀಶರಿಗೆ ಕಿರುಕುಳ, EVM ಜಾರಿಗೊಳಿಸಿ ಚುನಾವಣೆ ವ್ಯವಸ್ಥೆಯನ್ನೇ ದಿಕ್ಕುತಪ್ಪಿಸುತ್ತಿರುವುದು.

ಇವೆಲ್ಲಾ ಸಂವಿಧಾನ ಬದಲಾವಣೆಯ ಲಕ್ಷಣಗಳೇ ಮುನ್ಸೂಚನೆಗಳೇ ಅಥವಾ ಸ್ಯಾಂಪಲ್ ಗಳೇ ಆಗಿವೆ….!! ಇನ್ಯಾವ ಕೆಟ್ಟದಿನಗಳಿಗಾಗಿ ಕಾಯುತ್ತಿರುವಿರಿ… ಸಿದ್ಧವಾಗಲೇ ಬೇಕಿದೆ..!! ಎಲ್ಲ ಜಾತಿಧರ್ಮದವರು ಒಟ್ಟಿಗೆ ಸೇರಿ‌ ನಮ್ಮನ್ನೆಲ್ಲಾ ಕಾಪಾಡುತ್ತಿರುವ ಸಂವಿಧಾನವನ್ನು ಕಾಪಾಡಿಕೊಳ್ಳಲೇಬೇಕಿದೆ..! ಸಂವಿಧಾನವನ್ನು ಉಳಿಸಿಕೊಳ್ಳುವ ಸಂವಿಧಾನಾತ್ಮಕ ಮಾರ್ಗವನ್ನು ಕಂಡುಕೊಳ್ಳಲೇಬೇಕಿದೆ… ಬಸವರಾಜ್ ಯತ್ನಾಳ್ ರ ಮನೆಯ ಮುಂದಿನ ಪೀಳಿಗೆಯನ್ನು ಉಳಿಸಿಕೊಳ್ಳಲೇಬೇಕಿದೆ..!!

ಜೈಭೀಮ್… ಜೈಭಾರತ್…

-ಹ.ರಾ.ಮಹಿಶ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version