ದಿನದ ಸುದ್ದಿ

ಸೆಮಿ ಹೈಸ್ಪೀಡ್, ವಂದೇ ಭಾರತ್ ರೈಲು ನಿರ್ಮಾಣ ಕಾರ್ಯ ಪ್ರಗತಿಯಲ್ಲಿ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Published

on

ಸುದ್ದಿದಿನ ಡೆಸ್ಕ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚೆನ್ನೈನಲ್ಲಿ ಇಂಟಿಗ್ರೇಟೆಡ್ ಕೋಚ್ ಕಾರ್ಖಾನೆಯಲ್ಲಿ ಆಧುನಿಕ ರೈಲುಗಳ ತಯಾರಿಕೆಯನ್ನು ಶುಕ್ರವಾರ ಪರಿಶೀಲಿಸಿದರು.

ಸೆಮಿ ಹೈಸ್ಪೀಡ್, ವಂದೇ ಭಾರತ್ ರೈಲು ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದರು. ಐಸಿಎಫ್‌ನಲ್ಲಿ ಸಿದ್ಧವಾಗುತ್ತಿರುವ 12 ಸಾವಿರದನೇ ಪ್ರಯಾಣಿಕರ ಕೋಚ್‌ಗೆ ಹಸಿರು ನಿಶಾನೆ ತೋರಿದರು. ನಂತರ ತಯಾರಿಕಾ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಕಳೆದ ರಾತ್ರಿ ಕೇಂದ್ರ ಸಚಿವರು ಎಗ್ಮೋರ್ ನಿಲ್ದಾಣವನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಪರಿವರ್ತನೆಗೊಳ್ಳುತ್ತಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು. ಅಂತೆಯೇ ಭಾರತೀಯ ಆರ್ಥಿಕತೆಯ ಪರಿವರ್ತನೆಗೂ ಇದು ಸಹಾಯವಾಗಲಿದೆ ಎಂದರು.

ಗುಜರಾತ್‌ನ ಗಾಂಧಿನಗರ ರೈಲು ನಿಲ್ದಾಣ, ಮಧ್ಯಪ್ರದೇಶದ ಕಮಲಾಪತಿ ರೈಲು ನಿಲ್ದಾಣ ಸೇರಿದಂತೆ ಹಲವಾರು ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಲಾಗುತ್ತಿದೆ. ಚೆನ್ನೈ ಎಗ್ಮೋರ್, ಕನ್ಯಾಕುಮರಿ, ಮಧುರೈ, ರಾಮೇಶ್ವರಂ ಮತ್ತು ಕಾಟ್ಪಾಡಿ ರೈಲು ನಿಲ್ದಾಣಗಳು ಮೊದಲ ಹಂತದ ವ್ಯಾಪ್ತಿಗೆ ಒಳಪಡುತ್ತವೆ. ಈ ಐದು ರೈಲು ನಿಲ್ದಾಣಗಳನ್ನು ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುವುದು ಎಂದು ಸಚಿವರ ಅಶ್ವಿನಿ ವೈಷ್ಣವ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version