ದಿನದ ಸುದ್ದಿ

ಆನ್‌ಲೈನ್ ವ್ಯವಹಾರ ಮಾಡೋರಿಗೆ ಎಚ್ಚರಿಕೆಯ ಸುದ್ದಿ

ಶೇ. 25 ಭಾರತೀಯ ಗ್ರಾಹಕರು ಆನ್‌ಲೈನ್ ವ್ಯವಹಾರ ನಡೆಸುವಾಗ ಸೆಕ್ಯುರಿಟಿ ರಿಜನ್ ಗಳಿಗಾಗಿ ಮೋಸಕ್ಕೆ ಒಳಗಾಗಿದ್ದಾರೆ

Published

on

* ಸ್ವಲ್ಪ ಯಾಮಾರಿದ್ರೆ ಕ್ಷಣಾರ್ಧದಲ್ಲಿ ಮಂಗಮಾಯ ನಿಮ್ಮ ದುಡ್ಡು

 

ಸುದ್ದಿದಿನ ಡೆಸ್ಕ್: ಆನ್‌ಲೈನ್ ವ್ಯವಹಾರ ನಡೆಸುವಾಗ ಗ್ರಾಹಕರು ಬಹು ಎಚ್ಚರಿಕೆಯಿಂದ ಇರಬೇಕಾದ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಶೇ. 25 ಭಾರತೀಯ ಗ್ರಾಹಕರು ಆನ್‌ಲೈನ್ ವ್ಯವಹಾರ ನಡೆಸುವಾಗ ಸೆಕ್ಯುರಿಟಿ ರಿಜನ್ ಗಳಿಗಾಗಿ ಮೋಸಕ್ಕೆ ಒಳಗಾಗಿದ್ದಾರೆ ಎಂಬ ಆತಂಕ ವಿಷಯವನ್ನು ಗ್ಲೋಬಲ್ ಇನ್ಫಾರ್ಮೇಶನ್ ಸರ್ವೀಸ್ ಕಂಪನಿ ಎಕ್ಸಪೀರಿಯನ್ ವರದಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಗ್ರಾಹಕರು ಮೊಬೈಲ್ ನಲ್ಲಿ ವ್ಯವಹಾರ ಮಾಡುವುದನ್ನು ರೂಢಿಮಾಡಿಕೊಂಡಿದ್ದಾರೆ. ಮೊಬೈಲ್ ನಲ್ಲಿ ವಸ್ತುಗಳ ಖರೀದಿ, ಮಾರಾಟ ಮಾಡುವುದು ಇಂದು ಖುದ್ದಾಗಿ ಮಾರುಕಟ್ಟೆಯಲ್ಲಿ ಖರೀದಿಸಿದಣ್ಟೇ ಸರಳ, ಸಹಜವಾಗಿದೆ. ಆನ್‌ಲೈನ್ ವ್ಯವಹಾರ ವಂಚನೆ ಮಾಡುವ ಕೃತ್ಯಗಳಿಗೆ ಪ್ರೋತ್ಸಾಹ ನೀಡಲು ಸುಲಭವಾಗಿದೆ ಎಂದು ಸಂಸ್ಥೆ ನೀಡಿದ “ಡಿಜಿಟಲ್ ಕಂಜುಮರ್ ಇನ್ಸೈಟ್ಸ್-2018” ಹೆಸರಿನ ವರದಿ ತಿಳಿಸಿದೆ.

ಎಪ್ಯಾಕ್ (ಏಷ್ಯಾ- ಪೆಸಿಫಿಕ್) ದೇಶಗಳ ಪೈಕಿ ಭಾರತದ ಗ್ರಾಹಕರಲ್ಲಿ ಆನ್‌ಲೈನ್ ನಲ್ಲಿ ನಡೆಯುತ್ತಿರುವ ವಂಚನೆ, ಮೋಸ ಪ್ರಕರಣಗಳ ಬಗ್ಗೆ ಸೂಕ್ತ ಮಾಹಿತಿ, ಅರಿವು, ಜಾಗೃತಿ ಕೊರತೆ ಇದೆ ಎಂಬ ಅಂಶಗಳು ವರದಿಯಿಂದ ತಿಳಿದು ಬಂದಿದೆ ಎಂದು ಸಂಸ್ಥೆಯ ಭಾರತದ ಮುಖ್ಯಸ್ಥ ವೈಶಾಲಿ ಕಸ್ತೂರ್ ಹೇಳಿಕೆ ನೀಡಿದ್ದಾರೆ.

ಮೋಸ ಹೋದ ಗ್ರಾಹಕರಿಗೆ ಹಣವನ್ನು ವಾಪಸ್ ನೀಡುವುದರಿಂದ ಆನ್‌ಲೈನ್ ವಂಚನೆ, ಮೋಸ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ವಂಚನೆ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಲು ಹೆಚ್ಚು ಜಾಗೃತಿ ಹಾಗೂ ಸಾಮೂಹಿಕ ಹೋರಾಟದ ಅನಿವಾರ್ಯತೆ ಇದೆ.

ಎಪೆಕ್.ನ ೧೦ ದೇಶಗಳಾದ ಆಸ್ಟ್ರೇಲಿಯಾ, ಚೀನಾ, ಹಾಂಗ್ ಕಾಂಗ್, ಭಾರತ, ಇಂಡೋನೇಷ್ಯಾ, ಜಪಾನ್, ನ್ಯೂಜಿಲೆಂಡ್, ಸಿಂಗಪುರ್, ಥೈಲ್ಯಾಂಡ್, ವಿಯೆಟ್ನಾಂ ದೇಶಗಳ 3,200 ಗ್ರಾಹಕರನ್ನು ಸಮೀಕ್ಷೆ ನಡೆಸಲಾಗಿದೆ. ಮಾರ್ಕೆಟ್ ರಿಸರ್ಚ್ ಸಂಸ್ಥೆಯಾದ ಐಡಿಸಿ ಸಹಯೋಗದಲ್ಲಿ ಸಮೀಕ್ಷೆ ಕೈಗೊಂಡಿತ್ತು.

ಗ್ರಾಹಕರು ಆನ್‌ಲೈನ್ ವಂಚನೆ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಏಕೆಂದರೆ, ಡಿಜಿಟಲಿಕರಣದ ಹೆಚ್ಚಿನ ಅನುಕೂಲತೆಗಳು ದೊಡ್ಡ ಪ್ರಮಾಣದ ವಂಚನೆ ಪ್ರಕರಣಗಳಿಗೆ ಅವಕಾಶ ಮಾಡಿಕೊಡುತ್ತವೆ. ಆದ್ದರಿಂದ ಗ್ರಾಹಕರು, ಬಯೋಮೆಟ್ರಿಕ್, ಫೇಸಿಯಲ್, ದ್ವನಿ ಮೂಲಕ ಖಾತ್ರಿ ಪಡಿಸುವ ಸೌಲಭ್ಯ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದೆ.

ಶೇ. 53 ಭಾರತೀಯರು ದಾಖಲೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರಿಂದ ವಂಚನೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಗ್ರಾಹಕರು ಅಸಂಬದ್ದವಾಗಿ ಮಾಹಿತಿ ಹಂಚಿಕೊಳ್ಳುವ ಮೂಲಕ ವ್ಯಯಕ್ತಿಕ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version