ದಿನದ ಸುದ್ದಿ
ದಾವಣಗೆರೆ | ಕಂಟೈನ್‍ಮೆಂಟ್ ಝೋನ್ ಆಗಿ ರೈತರ ಬೀದಿ : ಎಸ್ಪಿ ಹನುಮಂತರಾಯ
ಸುದ್ದಿದಿನ, ದಾವಣಗೆರೆ: ಪಿಜೆ ಬಡಾವಣೆಯ ರೈತರ ಬೀದಿಯನ್ನು 8ನೇ ಕಂಟೈನ್‍ಮೆಂಟ್ ಝೋನ್ ಆಗಿಸಲು ಸರ್ವೇ ಕಾರ್ಯ ನಡೆದು ಬ್ಯಾರಿಕೇಡಿಂಗ್ ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಅಧ್ಯಯನ ಅವಶ್ಯಕತೆ ಇದೆ. ಈ ರೋಗಿಗೆ ಹೇಗೆ ಸೋಂಕು ತಗುಲಿರಬಹುದೆಂದು ಸ್ಟಡಿ ಮಾಡಬೇಕಿದೆ. ಎಲ್ಲಿಂದೆಲ್ಲ ಪ್ರಮುಖವಾಗಿ ಬೆಳ್ಳುಳ್ಳಿ, ಈರುಳ್ಳಿ ಈತ ತರುತ್ತಿದ್ದ ಟ್ರೇಡರ್ಸ್‍ಗೆ ಬರುತ್ತದೆ. ಎಪಿಎಂಸಿ ಅಥವಾ ಬೇರೆ ಪ್ರದೇಶಗಳಿಂದ ಬರುವ ಕುರಿತಾಗಿ ಮೂಲ ಪತ್ತೆ ಹಚ್ಚಬೇಕಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243