ದಿನದ ಸುದ್ದಿ

500 ಮೇಲ್ ಎಕ್ಸ್‌ಪ್ರೆಸ್ ರೈಲುಗಳು ಸೂಪರ್‌ಫಾಸ್ಟ್ ರೈಲುಗಳಾಗಿ ಪರಿವರ್ತನೆ : ರೈಲ್ವೆ ಸಚಿವಾಲಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಭಾರತೀಯ ರೈಲ್ವೇ 500 ಮೇಲ್ ಎಕ್ಸ್‌ಪ್ರೆಸ್ ( Express Train ) ರೈಲುಗಳನ್ನು ಸೂಪರ್‌ಫಾಸ್ಟ್ ರೈಲುಗಳ ( Super Fast ) ವಿಭಾಗಕ್ಕೆ ಸೇರ್ಪಡೆಗೊಳಿಸಿದೆ. ಇದರ ಜೊತೆಗೆ 130ಸೇವೆಗಳ ವೇಗವನ್ನು ಹೆಚ್ಚಿಸಲಾಗಿದ್ದು ಸೂಪರ್‌ಫಾಸ್ಟ್ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ.

ರೈಲುಗಳ ಪ್ರಯಾಣದ ಅವಧಿಯನ್ನು ಈ ವೇಗ ವೃದ್ಧಿ ಚಟುವಟಿಕೆಯಲ್ಲ್ಲಿ 10 ನಿಮಿಷದಿಂದ 30 ನಿಮಿಷಗಳ ಮಧ್ಯೆ ಕೈಗೊಳ್ಳಲಾಗಿದೆ. ಟ್ರೇನ್ಸ್ ಆಟ್ ಎ ಗ್ಲಾನ್ಸ್ ಎಂಬ ನೂತನ ಅಖಿಲ ಭಾರತೀಯ ರೈಲ್ವೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿ ರೈಲ್ವೇ ಸಚಿವಾಲಯ ಈ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದೆ.

ಇದನ್ನೂ ಓದಿ | ತಳಿ ಶಾಸ್ತ್ರಜ್ಞ ಸ್ವಾಂಟೆ ಪಾಬೊಗೆ ನೋಬೆಲ್ ಪರಸ್ಕಾರ

ಈ ಹೊಸ ವೇಳಾಪಟ್ಟಿ ಶನಿವಾರದಿಂದ ಜಾರಿಗೆ ಬಂದಿದೆ. 2019-20ಕ್ಕೆ ಹೋಲಿಸಿದಲ್ಲಿ 2022-23ರಲ್ಲಿ ಶೇ 84 ರಷ್ಟು ಮೇಲ್ ಎಕ್ಸ್ಪ್ರೆಸ್ ರೈಲುಗಳು ಸಮಯ ಪಾಲನೆಯನ್ನು ಮಾಡಿವೆ. ಇದು ಕಳೆದ ಸಾಲಿಗಿತ ಶೇ 9 ರಷ್ಟು ಅಧಿಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version