ಲೈಫ್ ಸ್ಟೈಲ್

ಕೊತ್ತಂಬರಿ ಸೊಪ್ಪು

Published

on

ಖಾದ್ಯ ಪದಾರ್ಥಗಳ ರುಚಿ ಮತ್ತು ಸುವಾಸನೆ ಹೆಚ್ಚಿಸಲು, ಅವುಗಳ ಮೇಲೆ ಕೊತ್ತಂಬರಿ ಸೊಪ್ಪನ್ನು ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು

  • ಇದರಲ್ಲಿ ಔಷಧೀಯ ಗುಣಧರ್ಮವಿದೆ. ಎ,ಬಿ,ಕೆ ಜೀವಸತ್ವಗಳಿದ್ದು; ಲೋಹಾಂಶವು ಇರುವುದರಿಂದ, ಒಂದು ಚಮಚ ಕೊತ್ತಂಬರಿ ಎಲೆಯ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ, ರಾತ್ರಿ ಮಲಗುವಾಗ ಸೇವಿಸಿದರೆ- ಶ್ವಾಸಕೋಶಗಳ ವಿಕಾರಗಳು ಶಮನಗೊಳ್ಳುತ್ತವೆ.
  • ಹೃದಯ ವಿಕಾರಗಳ ನಿವಾರಣೆಯಾಗುತ್ತದೆ. ಮೂಗು, ಕಿವಿ, ಕಣ್ಣುಗಳ ವಿಕಾರಗಳು ದೂರವಾಗುತ್ತವೆ.
  • ಕೊತ್ತಂಬರಿ ಸೊಪ್ಪಿನ ರಸದ ಎರಡು ಹನಿಗಳನ್ನು ಕಣ್ಣಿಗೆ ಹಾಕಿದರೆ ಕಣ್ಣಿನ ವಿಕಾರಗಳು ದೂರವಾಗುತ್ತವೆ.
  • ಮೂಗಿನಲ್ಲಿ ರಕ್ತ ಸೋರಿದರೆ, ಹಲ್ಲು ಗಟ್ಟಿಯಾಗಲು ಬಾಯಿ ಹುಣ್ಣು ನಿವಾರಿಸಲು, ಜ್ಞಾಪಕ ಶಕ್ತಿ ವೃದ್ಧಿಗೆ, ಅಜೀರ್ಣ, ವಾಂತಿ, ಬಿಕ್ಕಳೀಕೆ ನಿವಾರಣೆಗೆ ಸೂಕ್ತ ಔಷಧಿ.
    ಬಿಸಿಲಿನ ಬೇಗೆಯಿಂದ ರಕ್ತ ಸುರುಯುತ್ತಿದ್ದರೆ ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿಗೆ ಹಿಂಡಿದರೆ ರಕ್ತಸ್ರಾವ ತಕ್ಷಣ ನಿಲ್ಲುತ್ತದೆ.
  • ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

ನೂರುಗ್ರಾಂ ಕೊತ್ತಂಬರಿ ಸೊಪ್ಪಿನಲ್ಲಿರುವ ಪೋಷಕಾಂಶಗಳು

  • ತೇವಾಂಶ : 86.3 ಗ್ರಾಂ
  • ಸಸಾರಜನಕ : 3.3 ಗ್ರಾಂ
  • ಮೃದಸ್ಸು : 0.6 ಗ್ರಾಂ
  • ಖನಿಜಾಂಶ : 2.3 ಗ್ರಾಂ
  • ಕ್ಯಾಲ್ಷಿಯಂ : 184 ಮಿಲಿ ಗ್ರಾಂ
  • ಫಾಸ್ಫರಸ್ : 72 ಮಿಲಿ ಗ್ರಾಂ
  • ಕಬ್ಬಿಣ : 8.5 ಮಿಲಿ ಗ್ರಾಂ
  • ಎ ಜೀವಸತ್ವ : 864.5137 ಐ.ಯು
  • ಬಿ ಜೀವಸತ್ವ : 60 ಎಂ. ಸಿ.ಜಿ.
  • ರೈಬೋಪ್ಲಾವಿನ್ : 0.76 ಮಿಲಿ ಗ್ರಾಂ
  • ಸಿ ಜೀವಸತ್ವ : 131 ಮಿಲಿ ಗ್ರಾಂ
  • ಪೋಟಾಷಿಯಂ : 543 ಮಿಲಿ ಗ್ರಾಂ
  • ಪೋಟಾಷಿಯಂ : 543 ಮಿಲಿ ಗ್ರಾಂ
  • ಅಕ್ಯಾಲಿಕ್ ಆಮ್ಲ : 5 ಮಿಲಿ ಗ್ರಾಂ

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version