ಲೈಫ್ ಸ್ಟೈಲ್
ನವರಂಗಿ ನವರಾತ್ರಿಗೆ ಟಾಪ್ 9 ಫ್ಯಾಷನ್ ಟಿಪ್ಸ್..!
- ಚಿತ್ರಶ್ರೀ ಹರ್ಷ
ಕರೋನ ಕಾಟದ ನಡುವೆಯೇ , ಹಬ್ಬಗಳ ಸಾಲು ಹೊಸ್ತಿಲಲ್ಲಿ ನಿಂತಿರುವ ಬೆನ್ನಲ್ಲೇ, ಗಣೇಶನಿಗೆ ಟಾಟಾ ಹೇಳಿ, ಮಹಾ ಕಾಳಿಯ ಆರಾಧನೆಗೆ ಸಜ್ಜಾಗುತ್ತಿದೆ ಮಹಿಳಾ ಪಡೆ.
ಮಾಸ್ಕ್ , ಸ್ಯಾನಿಟೈಸರ್, ಸಾಮಾಜಿಕ ಅಂತರದ ಜೊತೆ ಜೊತೆಯಲ್ಲೇ ಸಾಂಪ್ರದಾಯಿಕ ಸಮ್ಮಿಶ್ರನ ವಾಗಿರುವ ಒಂಭತ್ತು ದಿನಗಳ ನವರಾತ್ರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ ಸಾಂಪ್ರದಾಯಿಕ ಗಾಗ್ರ ಚೋಲಿ ಹಾಗೂ ಚನಿಯಾ ಚೋಲಿ ಯಿಂದ , ಇಂಡೋ-ವೆಸ್ಟರ್ನ್ ಮಿಕ್ಸ್ -ಮ್ಯಾಚ್ ಫ್ಯಾಷನ್ವರೆಗೂ ನೂತನ ಟ್ರೆಂಡ್ ಸೃಷ್ಟಿ ಆಡುತ್ತಲೇ ಇದೆ.
ಕರೋನ ಭೀತಿಯ ನಡುವೆಯೂ ನವರಾತ್ರಿಯ ದಾಂಡಿಯಾ ರಾಸ್ ರಸಸಂಜೆಗೆಂದೇ ಪಾರ್ಟಿ ಪ್ರಿಯರು ಸಜ್ಜಾಗುತ್ತಿದ್ದು, ಡಾಂಡಿಯಾ ಪಾರ್ಟಿ ಗೆ ಇದೋ ಇಲ್ಲಿದೆ ನೋಡಿ ಕೆಲವು ಫ್ಯಾಷನ್ ಟಿಪ್ಸ್.
ನವರಂಗಿ ನವರಾತ್ರಿ ಗೆ ಟಾಪ್ 9 ಫ್ಯಾಷನ್ ಟಿಪ್ಸ್
1. ಪೋಟ್ಲೀ ಬ್ಯಾಗ್-ಮ್ಯಾಚಿಂಗ್ ಮಾಸ್ಕ್
ಭಾರತದೆಲ್ಲೆಡೆ ಒಂಭತ್ತು ದಿನಗಳ ಸುದೀರ್ಘ ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ ಮಹಿಳಾ ಪಡೆ. ಆಕರ್ಷಕ ಕಸೂತಿ ಹೊಂದಿರುವ ಪುಟ್ಟ ಪೋಟಲೀ ಬ್ಯಾಗ್ ಗಳು ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಗೋಲ್ಡನ್ ಗ್ಲಿಟರ್ ಫ್ಯಾಬ್ರಿಕ್ ಹಾಗೂ ದೇಸೀ ಬಣ್ಣಗಳ ಕಾಂಬಿನೇಷನ್ ನಲ್ಲಿ ಕುಂದನ್,ಹರಳು ಗಳನ್ನು ಬಳಸಿ ಮಾಡಲಾಗಿರುವ ಈ ಪೋಟ್ಲೀ ಬ್ಯಾಗ್ ಗಳು ಗುಜರಾತಿ ಗರ್ಭಾ ಗಳಲ್ಲಿ ಮಹಿಳೆಯರ ಸಾಂಪ್ರದಾಯಿಕ ಉಡುಪಿಗೆ ಒಪ್ಪುವಂತಿದೆ.
- ನವರಾತ್ರಿಯ ಮ್ಯಾಚಿಂಗ್ ಮಾಸ್ಕ್
ವೈರಸ್-ಬ್ಯಾಕ್ಟೀರಿಯಾ ಗಳಿಗೆ ಹೆದರಿ ಪಾರ್ಟಿ ಮಾಡುವುದನ್ನು ನಿಲ್ಲಿಸಿದ್ದ ಪಾರ್ಟಿ ಪ್ರಿಯರು , ಈಗ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಬಾಂದಿನಿ , ರಾಜಸ್ಥಾನಿ ಕಸೂತಿಯ ಫೇಸ್ ಮಾಸ್ಕ್ ಧರಿಸಿ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಈ ಮ್ಯಾಚಿಂಗ್ ಸೀಕ್ವೀನ್ ಫೇಸ್ ಮಾಸ್ಕ್ ಫ್ಯಾಷನ್! ನವರಾತ್ರಿಯ ಒಂಭತ್ತು ದಿನಗಳ, ನವ ವರ್ಣದ ಉತ್ಸವಕ್ಕೆ ಒಂಭತ್ತು ವಿವಿಧ ವಿನ್ಯಾಸದ ಮಾಸ್ಕ್ ಮಾರುಕಟ್ಟೆ ಗೆ ಲಗ್ಗೆ ಇಟ್ಟಿದೆ.
2. ಮಾತಾ ಪಟ್ಟಿ/ ಮಾಂಗ್ ಟೀಕಾ
ಆಧುನಿಕ ಫ್ಯಾಷನ್ ಯುಗದಲ್ಲಿ, ಹಳೆಯ ಕಾಲದ ಸಾಂಪ್ರದಾಯಿಕ ಗುಂಡು ಯಾಂಗ್ ಟೀಕಾ ಬದಲಿಗೆ ಆಕರ್ಷಕ ಆಕ್ಸಿಡೈಸ್ಡ್ ಕಪ್ಪು ಲೋಹದ ಆಭರಣಗಳು ಟ್ರೆಂಡ್ ಆಗುತ್ತಿದೆ. ನವರಾತ್ರಿ ಆಚರಣೆ ಯು ದಾಂಡಿಯಾ ಶೃಂಗಾರಕ್ಕೆ ಮತ್ತಷ್ಟು ರಂಗು ತುಂಬಲು ರಂಗಿನ ಮಾತಾ ಪಟ್ಟಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮಾವಿನ ಕಾಯಿ, ಪಕ್ಷಿ, ಎಲೆ, ಬುಗುರಿ, ಮತ್ತು ಟ್ರೈಬಲ್ ಡಿಸೈನರ್ ಮಾತಾ ಪಟ್ಟಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ.
3.ಪಗಡಿ
ಇತ್ತೀಚಿನ ದಿನಗಳಲ್ಲಿ ಆಧುನಿಕ ಡಿಸ್ಕೋ ಡಾಂಡಿಯಾ ಪಾರ್ಟಿ ರಂಗೇರುತ್ತಿದ್ದು,. ಯುವಪೀಳಿಗೆಯನ್ನು ಕೈ ಬೀಸಿ ಕರೆಯುತ್ತಿದೆ. ಪಗಡಿ , ಫ್ಯೂಜನ್ ಫ್ಯಾಷನ್ ನಾ ಬಹು ಮುಖ್ಯ ಅಂಗವಾಗಿದ್ದು, ಆಧುನಿಕ ಮಹಿಳೆಯರ ಅಭಿರುಚಿಗೆ ತಕ್ಕಂತೆ ಕಲರ್ಫುಲ್ ಪಗಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಲ್ಟಿಕಲರ್ ಕುರ್ತಾ-ಧೋತಿ ಸ್ಟೈಲ್ ಪೈಜಾಮ ನೊಂದಿಗೆ ಇವು ಹೆಚ್ಚು ಸ್ಟೈಲಿಶ್ ಲುಕ್ ನೀಡುತ್ತದೆ.
4.ಪಾಂಪಾಂ ಟ್ರೆಂಡ್
ಪಾಂಪಾಂ ಟ್ರೆಂಡ್ ಮಾಡಿಸಿತು ಎನ್ನುವಷ್ಟರಲ್ಲೇ.. ಗುಜರಾತಿ ಗರ್ಭಾ ಗಳಲ್ಲಿ ಮಹಿಳೆಯರ ಸಾಂಪ್ರದಾಯಿಕ ಲೆಹೆಂಗಾ, ಘಾಗ್ರಚೋಲಿ, ಪಾದರಕ್ಷೆ, ಆಭರಣಗಳಲ್ಲಿ ಈ ಕಲರ್ಫುಲ್ ವುಲ್ಲನ್ ಗೋಲಿಗಳು ತಮ್ಮ ಕಮಾಲ್ ತೋರುತ್ತದೆ.ಆಕ್ಸಿಡೈಸ್ಡ್ ಕಪ್ಪು ಲೋಹದ ಆಭರಣಗಳು. ಪಾಂಪಾಂ ಫ್ಯುಜನ್ ಫ್ಯಾಷನ್ ನಾ ಅಗ್ರಸ್ಥಾನದಲ್ಲಿದೆ.
5.ಗುಜರಾತಿ ಪ್ರಿಂಟ್ ಜಾಕೆಟ್
ಕರಕುಶಲ ವಸ್ತುಗಳ ಪ್ರಮುಖ ತಾಣ ವಾಗಿರುವ ಗುಜರಾತಿನ ಕೋಚ್ ಎಂಬ್ರಾಯ್ಡರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಈ ಧರ್ಮೀಯ ಕೋಚ್ ವರ್ಕ್ ನ ಗುಜರಾತಿ ಕರಕುಶಲ ಜಾಕೆಟ್ ಗಳು ಮಾರುಕಟ್ಟೆಗೆ ಧಾವಿಸಿದ್ದು, ಹಬ್ಬಕ್ಕೆ ಮತ್ತಷ್ಟು ಕಲರ್ಫುಲ್ ಎಫೆಕ್ಟ್ ನೀಡುತ್ತಿದೆ.
6.ಖೇದಿಯಾ-ಧೋತಿ
ಟಿಪಿಕಲ್ ಆಗಿದ್ದ ಧೋತಿಗೆ ಹೊಸ ರೂಪ ಸಿಕ್ಕಿದೆ. ಕ್ರಾಪ್ ಟಾಪ್ ಹಾಗೂ ಇಂಡೋ ವೆಸ್ಟರ್ನ್ ಶೈಲಿಯಲ್ಲಿ ಮಿಕ್ಸ್ ಮ್ಯಾಚ್ ಟಾಪ್‌ಗೆ ಧರಿಸುವ ಹೊಸ ಫ್ಯಾಷನ್ ರಾರಯಂಪ್‌ನಲ್ಲಿ ಹಂಗಾಮ ಎಬ್ಬಿಸಿದೆ.ಧೋತಿಗೆ ಕಮೀಝ್ ಹಾಗೂ ಕುರ್ತಾ ಧರಿಸುವ ಹಳೆ ಫ್ಯಾಷನ್ ಸೈಡಿಗೆ ಸರಿದಿದೆ. ಅದರ ಬದಲು ಕ್ರಾಪ್ ಟಾಪ್, ಕೋಲ್ಡ್ ಶೋಲ್ಡರ್ ಟಾಪ್, ಕೇಪ್ ಸ್ಟೈಲ್, ಶಾರ್ಟ್ ಬ್ಲೌಸ್, ಸೆಮಿ ಎಥ್ನಿಕ್ ಟೀ ಶರ್ಟ್ ಹೀಗೆ ಒಂದಿಷ್ಟು ವಿನೂತನ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡುವ ಫ್ಯಾಷನ್ ಇಂದು ಟ್ರೆಂಡಿಯಾಗಿದೆ. ಈ ಸ್ಟೈಲ್‌ಗೆ ಪೂರಕ ಎಂಬಂತೆ ಧೋತಿಯ ಪಕ್ಕಾ ಟ್ರಡಿಷನಲ್ ಸ್ಟಿಚ್ಚಿಂಗ್ ಸ್ಟೈಲ್ ಕೂಡ ಬದಲಾಗಿದೆ. ನೋಡಲು ಧೋತಿಯಂತೆ ಕಂಡರೂ ಇದರ ಫ್ಲೀಟ್ಸ್ ಅಂದರೆ ನೆರಿಗೆಗಳು ಬದಲಾಗಿವೆ. ಬಿಗ್ ಫ್ಲೀಟ್ಸ್ ಬದಲು ಮೈಕ್ರೋ ಫ್ಲೀಟ್ಸ್ ಸ್ಥಾನ ಪಡೆದಿವೆ.
7. ಇ- ಡಾಂಡಿಯಾ ಕೋಲುಗಳು
ಸಾಮಾನ್ಯ ವಾಗಿ ಮಾರುಕಟ್ಟೆಯಲ್ಲಿ ಸಿಗುವ ಕೋಲಾಟದ ಕಡ್ಡಿಗಳೂ ಈಗ ಮಿರ ಮಿರ ಮಿರುಗುಯತ್ತಿವೆ. ಡಿಸ್ಕೋ ಡಾಂಡಿಯಾ ಗೆಂದೇ, ಎಲ್.ಇ.ಡಿ ದಾಂಡಿಯಾ ಕೋಲುಗಳು ಮೋರುಕಟ್ಟೆಗೆ ಬಂದಿದ್ದು, ಡಿಸ್ಕೋ ಡಾಂಡಿಯಾ ಪಾರ್ಟಿ ಪ್ರಿಯರು ನಿಯಾನ್ ಕಲರ್ಸ್ ಇ-ಡಾಂಡಿಯಾ ಕೋಲುಗಳಿಗೆ ಮುಗಿ ಬೀಳುತ್ತಿದ್ದಾರೆ.
8. ಆಕ್ಸಿಡೈಸ್ಡ್ ಆಭರಣಗಳು
ದೊಡ್ಡ ಗಾತ್ರದ ಝುಮುಕಿ, ಬಳೆ,ಮೇಲು ಕುತ್ತಿಗೆ ಸರ-ಹಾರ ಗಳ ಅಬ್ಬರ ಆಭರಣ ಲೋಕದಲ್ಲಿ ಸದ್ಯ ಸಕ್ಕತ್ ವೈರಲ್. ನವರಾತ್ರಿ ಯ ಸಾಂಪ್ರದಾಯಿಕ ಉಡುಪುಗಳೊಂದಿಗೆ ಈ ಕಪ್ಪು ಲೋಹದ ಒಡವೆಗಳು ಸಕ್ಕತ್ ಆಗಿ ಮ್ಯಾಚ್ ಆಗುತ್ತದೆ. ಹೊಚ್ಚ ಹೊಸಾ ವಿನ್ಯಾಸದ ಕಪ್ಪು ಲೋಹದ ಆಭರಣಗಳ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ. ಹಾಗಾದ್ರೆ ಈ ಬಾರಿಯ ದಸರಾ ಡಾಂಡಿಯಾ ಡ್ರೆಸ್ ನೊಂದಿಗೆ ಕಪ್ಪು ಲೋಹದ ಆಭರಣಗಳ ಧರಿಸುವುದು ಮರೆಯದಿರಿ
9.ಬಾಡಿ ಟ್ಯಾಟೂ
ನವರಾತ್ರಿಯ ಹೆಂಗಳೆಯರ ಶೃಂಗಾರಕ್ಕೆ ಮತ್ತಷ್ಟು ಗ್ಲಾಮರಸ್ ಲುಕ್ ನೀಡುತ್ತದೆ ನವರಾತ್ರಿ ಬಾಡಿ ಟ್ಯಾಟೂ..ಡೀಪ್ ಬ್ಯಾಕ್ ಬ್ಲೌಸ್ ಧರಿಸಿ, ಬೆನ್ನು ಮೇಲೆ ನವರಾತ್ರಿ ಸಿರಿಯಾ ಟ್ಯಾಟೂ ಯುವಪೀಳಿಗೆ ಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ. ಕಿತ್ತು, ಕೈ ತೋಳು, ಬೆನ್ನಿನ ಮೇಲೆ ನವರಾತ್ರಿ ಬಾಡಿ ಟ್ಯಾಟೂ ಕ್ರೇಜ್ ವೈರಲ್ ಆಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243