ದಿನದ ಸುದ್ದಿ

ಕೊರೋನಾ ಸಂಕಷ್ಟದಲ್ಲಿ ನರಕವಾದ ಆಸ್ಪತ್ರೆಗಳು

Published

on

ಕೊರೋನಾ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ಆಹಾರವನ್ನು ಕೊಡುತ್ತಿಲ್ಲ ಇದರಿಂದಾಗಿ ಶಂಕಿತರು ಹಾಗೂ ಸೋಂಕಿತರು ಚಿಕಿತ್ಸೆಯಿಲ್ಲದೆ ನರಕವನ್ನು ಅನುಭವಿಸುತ್ತಿದ್ದಾರೆ.

ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸರಿಯಾದ ವ್ಯವಸ್ಥೆಯನ್ನು ಮಾಡಬೇಕು ಮತ್ತು ಇದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತಿಳಿದುಕೊಳ್ಳಬೇಕು ಜನರ ಸಹಾಯಕ್ಕೆ ಸರ್ಕಾರ ಸ್ಪಂದಿಸಬೇಕು. ದಿನೇದಿನೇ ಸೋಂಕಿನ ಹರಡುವಿಕೆ ಆಗುತ್ತಿದೆ, ನಿಯಂತ್ರಣ ಬರುತ್ತಿಲ್ಲ, ಇನ್ನೂ ಕೆಟ್ಟ ರೀತಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಇದಕ್ಕೆ ಒಂದು ವ್ಯವಸ್ಥೆಯನ್ನು ಮಾಡಬೇಕು.

ಹೆಮ್ಮಾರಿ ಕೊರೋನ ಭಯದಿಂದ ರಾಜ್ಯದಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಮುಚ್ಚಿವೆ,
ಸಾಧಾರಣ ಜ್ವರ ಕೆಮ್ಮು ನೆಗಡಿ ಇರುವವರನ್ನೂ ನೋಡಲು ಯಾವ ವೈದ್ಯರೂ ಸಿಗ್ತಿಲ್ಲ ಮತ್ತು ಮುಂದಾಗುತ್ತಿಲ್ಲ, ಬಿಪಿ ಶುಗರ್ ರೋಗಿಗಳ ಸಂಕಟ ಕೇಳುವವರು ಯಾರು ಇಲ್ಲ, ಕೋವಿಡ್ 19 ಆಸ್ಪತ್ರೆ ಗಳ ಅವ್ಯವಸ್ಥೆ ಹೆಚ್ಚಾಗಿದೆ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಗಳ ಕೊರತೆ, ಊಟದ ಕೊರತೆ ಮತ್ತು ಸರಿಯಾದ ಸಮಯದಲ್ಲಿ ಔಷಧಿಯನ್ನು ಯಾರು ವಿತರಿಸುತ್ತಿಲ್ಲ.

ಇನ್ನು ಕೆಲ ಆಸ್ಪತ್ರೆಗಳಲ್ಲಿ ಆಹಾರವಿಲ್ಲದೆ ಜನರು ಒದ್ದಾಡುತ್ತಿದ್ದಾರೆ, ಸೋಂಕಿತರನ್ನು ಮತ್ತು ಶಂಕಿತರನ್ನು ಸರಿಯಾಗಿಯೂ ನಡೆಸಿಕೊಳ್ಳುತ್ತಿಲ್ಲ ಎಲ್ಲರನ್ನು ಒಟ್ಟಿಗೆ ಇರಿಸಿದ್ದಾರೆ ಆಸ್ಪತ್ರೆಯ ಅವಾಂತರ ನಿರ್ಲಕ್ಷ್ಯವನ್ನು ಸ್ವತ ರೋಗಿಗಳು ಹೇಳಿ ಕೊಂಡಿದ್ದಾರೆ, ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಅದೆಷ್ಟೋ ಜನರಿಗೆ ತಮ್ಮ ರಿಪೋರ್ಟ್ ಏನೂ ಎನ್ನುವುದನ್ನೂ ಸಹ ಆಸ್ಪತ್ರೆಯವರು ಇನ್ನೂ ಹೇಳಿಲ್ಲ, ತಿಂಗಳಿಂದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಜನರು ತಮಗೆ ಯಾವ ಲಕ್ಷಣಗಳೂ ಇಲ್ಲ, ಆರೋಗ್ಯವಾಗಿದ್ದೇನೆ, ನಮ್ಮನು ಬಿಟ್ಟುಬಿಡಿ ಎಂದು ಕೇಳುತ್ತಿದ್ದರು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ ಮಾಡುತ್ತಿದ್ದಾರೆ.

ಕೋವಿಡ್ ಆಸ್ಪತ್ರೆಗಳಲ್ಲಿ ಕೋರೋನ ಬಿಟ್ಟು ಕ್ಯಾನ್ಸರ್, ಬಿಪಿ, ಶುಗರ್ ರೋಗಿಗಳು ಸಹ ಇದ್ದಾರೆ ಅವರನ್ನು ಕೊರೋನ ರೋಗಿಗಳ ಜೊತೆಗೆ ಇರಿಸಿರುವುದು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಇನ್ನೂ ಖಾಸಗಿ ಆಸ್ಪತ್ರೆ ಗಳಲ್ಲಿ ಕೊರೋನ ಚಿಕಿತ್ಸೆಯು ಶುರುವಾಗಿರುವ ಹಿನ್ನಲೆಯಲ್ಲಿ ಸರ್ಕಾರ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಒಂದು ವ್ಯವಸ್ಥೆಯನ್ನಾಗಿ ಮಾಡಬೇಕು.

ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ಆಹಾರ ವಿತರಣೆಯನ್ನು ಸರಿಯಾದ ಸಮಯದಲ್ಲಿ ನೀಡುವಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಎಚ್ಚರವಹಿಸಬೇಕು, ಇನ್ನು ಖಾಸಗಿ ಆಸ್ಪತ್ರೆಗಳಿಗೆ ನಿಗದಿತವಾದ ದರದಲ್ಲಿ ಜನರಿಗೆ ಚಿಕತ್ಸೆ ಯನ್ನು ಕೊಡುವಂತೆ ಆದೇಶಿಸಬೇಕು, ಜನರು ಕೂಡ ಈ ತುರ್ತು ಸಂದರ್ಭದಲ್ಲಿ ತಮ್ಮ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಮಾಸ್ಕನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.

-ದಿವ್ಯಶ್ರೀ. ವಿ
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version