ದಿನದ ಸುದ್ದಿ
ರಾಜ್ಯದಲ್ಲಿಂದು 29,438 ಕೊರೋನಾ ಪ್ರಕರಣ ಪತ್ತೆ ; 208 ಮಂದಿ ಸಾವು
ಸುದ್ದಿದಿನ,ಬೆಂಗಳೂರು: ಕರ್ನಾಟಕದಲ್ಲಿಂದು 29,438 ಮಂದಿಗೆ ಕೊರೊನಾ ಸೋಂಕು ತಗುಲಿದೆ. 208 ಮಂದಿ ಮೃತಪಟ್ಟಿದ್ದು 9,058 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲೇ 17,342 ಮಂದಿಗೆ ಸೋಂಕು ಬಂದಿದ್ದು 149 ಮಂದಿ ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ 1,559, ಹಾಸನ 825, ಬಳ್ಳಾರಿ 751, ಮಂಡ್ಯ 688, ಬೆಂಗಳೂರು ಗ್ರಾಮಾಂತರ 684 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ರಾಜ್ಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 13,04,397ಕ್ಕೆ ಏರಿಕೆ ಆಗಿದೆ. ಈ ಪೈಕಿ 10,55,612 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2,34,485 ಸಕ್ರಿಯ ಪ್ರಕರಗಳಿವೆ. ಈ ಪೈಕಿ ಬೆಂಗಳೂರು ನಗರದಲ್ಲೇ 1,62,171 ಸಕ್ರಿಯ ಪ್ರಕರಣಗಳಿವೆ.
ಇಲ್ಲಿಯವರೆಗೆ ಒಟ್ಟು 14,283 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 16,213 ಆಂಟಿಜನ್, 1,73,400 ಆಗ್ನಿ ಪಿಸಿಆರ್ ಸೇರಿದಂತೆ ಒಟ್ಟು 1,89,613 ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಇಂದು ಒಟ್ಟು 1,04,637 ಮಂದಿಗೆ ಲಸಿಕೆ ನೀಡಲಾಗಿದೆ.
ಐಸಿಯು ಸೋಂಕಿತರ ಸಂಖ್ಯೆ 1,280ಕ್ಕೆ ಏರಿಕೆ ಆಗಿದ್ದು, ಬೆಂಗಳೂರು ನಗರದಲ್ಲಿ 259, ಕಲಬುರಗಿಯಲ್ಲಿ 265, ದಾವಣಗೆರೆಯಲ್ಲಿ 85 ಮಂದಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243