ದಿನದ ಸುದ್ದಿ
ರಾಜ್ಯದಲ್ಲಿ ಶುಕ್ರವಾರ 7,908 ಮಂದಿಗೆ ಸೋಂಕು: ಯಾವ ಜಿಲ್ಲೆಯಲ್ಲಿ, ಎಷ್ಟು..?
ಸುದ್ದಿದಿನ, ಬೆಂಗಳೂರು : ಕೊರೋನಾ ಸೋಂಕು ಪ್ರಕರಣಗಳ ಸಂಬಂಧ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಶುಕ್ರವಾರ 7,908 ನೂತನ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 2,11,108ಕ್ಕೆ ಏರಿದೆ ಎಂದು ತಿಳಿಸಿದೆ.
ಶುಕ್ರವಾರ ಸಾವನ್ನಪ್ಪಿದ 104 ಸೇರಿ ರಾಜ್ಯದಲ್ಲಿ ಈವರೆಗೆ ಒಟ್ಟು 3,717 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಶುಕ್ರವಾರ 2,452 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಜಿಲ್ಲಾವಾರು ವರದಿ
ಬೆಂಗಳೂರು ನಗರ-2452, ಬಳ್ಳಾರಿ-608, ಶಿವಮೊಗ್ಗ-413, ದಾವಣಗೆರೆ-351, ಬೆಳಗಾವಿ-334, ಉಡುಪಿ-322, ದಕ್ಷಿಣ ಕನ್ನಡ-307, ಮೈಸೂರು-291, ಕಲಬುರಗಿ-229, ರಾಯಚೂರು-220, ಧಾರವಾಡ-219, ಗದಗ-190, ತುಮಕೂರು-185, ಬಾಗಲಕೋಟೆ-171, ಮಂಡ್ಯ-163, ಕೊಪ್ಪಳ-162, ಹಾಸನ-158, ವಿಜಯಪುರ-144, ಹಾವೇರಿ-138, ಯಾದಗಿರಿ-116, ಚಿಕ್ಕಮಗಳೂರು-104, ಬೀದರ್-97, ಉತ್ತರ ಕನ್ನಡ-87, ರಾಮನಗರ-87, ಕೋಲಾರ-81, ಚಿತ್ರದುರ್ಗ-77, ಚಾಮರಾಜನಗರ-61, ಕೊಡಗು-60, ಚಿಕ್ಕಬಳ್ಳಾಪುರ-42, ಬೆಂಗಳೂರು ಗ್ರಾ.-39.
ಸುದ್ದಿದಿನ.ಕಾಂ|ವಾಟ್ಸಾಪ್|9980346243