ದಿನದ ಸುದ್ದಿ
ಕೊರೋನಾದಿಂದ ಸೇಫಾದ ವೃದ್ಧ..!
ಸುದ್ದಿದಿನ,ಕಲಬುರಗಿ : ಏಪ್ರಿಲ್ 21 ರಂದು ಕೊರೋನಾ ಸೋಂಕಿಗೆ ಗುರಿಯಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಲಬುರಗಿ ನಗರದ ಉಮರ್ ಕಾಲೋನಿಯ 61 ವರ್ಷದ ವೃದ್ಧ ಗುಣಮುಖನಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 67 ರೋಗಿಗಳಲ್ಲಿ 29 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 6 ಜನ ನಿಧನರಾಗಿದ್ದು, ಉಳಿದಂತೆ 32 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243