ದಿನದ ಸುದ್ದಿ
ಕೊರೋನಾ ನಡುವೆ CET ಯ ದುಸ್ಸಾಹಸ
ಸರ್ಕಾರವು ಕೊರೋನ ಸಮಯದಲ್ಲಿ ದಿಟ್ಟತನದಿಂದ ಒಗ್ಗೂಡಿ ಹೋರಾಡುವುದು ಒಳ್ಳೆಯದೇ. ಆದರೆ ಹೇಗೋ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮಾಡಿ ಕೊಂಚ ಮಟ್ಟಿಗೆ ನಿರಾಳವಾಗಿದೆ. ಆದರೆ ಎಸೆಸೆಲ್ಸಿ ಪರೀಕ್ಷೆ ಸಮಯದಲ್ಲಿ 32 ವಿದ್ಯಾರ್ಥಿಗಳಲ್ಲಿ ಕೋರೋನ ಸೋಂಕು ದೃಢವಾಗಿ 10 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿಲ್ಲ. ಇದರ ಜೊತೆಗೆ ಮತ್ತೆ ಸಿಇಟಿ ಪರೀಕ್ಷೆಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಎಲ್ಲರ ಪ್ರಶ್ನೆ.
ಈಗಾಗಲೇ ಕೋವಿಡ್ ಗೆ ಸಂಬಂಧಿಸಿದಂತೆ ಸೋಂಕು ತಗಳಿದವರಿಗೆ ಸರಿಯಾದ ವ್ಯವಸ್ಥೆ ಇಲ್ಲ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದ್ದು ಅದರ ವಿರುದ್ಧ ಹೋರಾಟ ನಡೆಯುತ್ತಿದೆ.ಈಗಾಗಲೇ ನಿಗದಿಯಾಗಿದ್ದ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಆದರೂ ಸಹ ಸಿಇಟಿ ಪರೀಕ್ಷೆ ನಡೆಸುವ ಮಹತ್ ಸಾಹಸಕ್ಕೆ ಕೈ ಹಾಕಿರುವುದು ಎಷ್ಟು ಸರಿ.ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತು ಆಕ್ಷೇಪಣೆಗಳು ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿಗಳು ಪ್ರಾಣದ ಹಂಗನ್ನು ತೊರೆದು ಮನೆಯಿಂದ ಆಚೆ ಬರಬೇಕಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆದರೆ ಯಾರನ್ನು ಕೇಳುವುದು ಇಲ್ಲಸಲ್ಲದ ಸಮಸ್ಯೆಯನ್ನು ಮೈ ಮೇಲೆ ಎಳೆದು ಕೊಳ್ಳುವ ಹುನ್ನಾರ ನಡೆದಿದೆ ಎಂದು ಮೇಲ್ಮಟ್ಟಕ್ಕೆ ತಿಳಿಯುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243