ದಿನದ ಸುದ್ದಿ

ಕೊರೋನಾ ಕುರಿತು ಜನರಿಗೆ ಈವರೆಗೂ ಅರಿವಿಲ್ಲ : ಎಸ್ಪಿ ಹನುಮಂತರಾಯ

Published

on

ಸುದ್ದಿದಿನ,ದಾವಣಗೆರೆ : 6 ತಿಂಗಳಿನಿಂದ ಕೊರೊನಾದಿಂದ ಒದ್ದಾಡುತ್ತಿದ್ದರೂ ಜನರು ಜಾಗೃತಿ ಹೊಂದಿಲ್ಲ. ಬಹಳಷ್ಟು ಕಡೆಗಣಿಸುತ್ತಿದ್ದಾರೆ. ಕೊರೊನಾ ಕುರಿತು ಜನರಿಗೆ ಈವರೆಗೂ ಅರಿವಿಲ್ಲ ಎಂದು ಜಿಲ್ಲಾವರಿಷ್ಠಾಧಿಕಾರಿ ವಿಷಾದ ವ್ಯಕ್ತಪಡಿಸಿದರು.

ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ಮನುಷ್ಯನ ಹುಟ್ಟು ಸ್ವಭಾವವವೇ ಇದಾಗಿದೆ. ಯಾರೂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಹಾಗಿರುವಾಗ ಕೊರೊನಾ ನಿಯಂತ್ರಣ ಕಷ್ಟ ಸಾಧ್ಯ ಎಂದ ಅವರು, ಭೂಮಿ ಮೇಲಿರುವ ಯಾವ ವೈರಸ್‍ನ್ನೂ ನಾವು ಸೋಲಿಸಲು ಆಗಿಲ್ಲ. ಅದಕ್ಕೆ ಮದ್ದು ಸಿಕ್ಕಿಲ್ಲ. ಅದೇ ರೀತಿ ಕೊರೊನಾ ವೈರಸ್ ಕೂಡ ಹೊಸದಾಗಿದ್ದು, ಪರಿಸ್ಥಿತಿ ತುಂಬಾ ಚಾಲೆಂಜಿಂಗ್ ಆಗಿದೆ. ಅದನ್ನು ಎಲ್ಲರೂ ಎದುರಿಸಬೇಕಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version