ದಿನದ ಸುದ್ದಿ
ದಾವಣಗೆರೆ | ಎಸ್ಪಿ ಗೆ ಕೊರೋನಾ ಪಾಸಿಟಿವ್; ಡಿಸಿ ಹೋಂ ಕ್ವಾರೆಂಟೈನ್..!
ಸುದ್ದಿದಿನ,ದಾವಣಗೆರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಾಯ ಅವರಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಡಿಸಿ ಮಹಾಂತೇಶ್ ಬೀಳಗಿ ಹೋಮ್ ಕ್ವಾರೆಂಟೈನ್ ಆಗಿದ್ದಾರೆ. ಇದನ್ನು ಸ್ವತಃ ಡಿಸಿಯವರೇ ಸ್ಪಷ್ಟಪಡಿಸಿದ್ದಾರೆ.
ನಾನು ಎಸ್ಪಿಯವರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಹೋಮ್ ಕ್ವಾರೆಂಟೈನ್ ನಲ್ಲಿ ಇರುತ್ತೇನೆ. ಮನೆಯಿಂದಲೇ ನಾನು ಕೆಲಸ ಮಾಡುತ್ತೇನೆ. ತುರ್ತು ಪರಿಸ್ಥಿತಿ ಏನಾದರೂ ಇದ್ದರೆ ಮಾತ್ರ ನನ್ನನ್ನು ಸಂಪರ್ಕಿಸಬಹುದು ಎಂದು ಡಿಸಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243