ದಿನದ ಸುದ್ದಿ

ಕೊರೊನಾ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ರದ್ದು

Published

on

ಸುದ್ದಿದಿನ,ವಿಜಯಪುರ: ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಪ್ರತಿವರ್ಷವು ಅಕ್ಷಯ ತೃತಿಯದಂದು ಮೂರು ದಿನಗಳವರೆಗೆ ಶ್ರೀ ಕುಲಂಕಾರೇಶ್ವರ ದೇವಸ್ಥಾನವನ್ನು ಜರುಗುತ್ತಲಿತ್ತು. ಆದರೆ ಈ ವರ್ಷ ಮಹಾಮಾರಿ ಕೊರೊನಾ ಹಿನ್ನಲೆಯಲ್ಲಿ ಹಾಗೂ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಅಥರ್ಗಾ ಗ್ರಾಮದ ಜಾತ್ರೆಯನ್ನು ಗ್ರಾಮದ ಹಿರಿಯರು, ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರೇಲ್ಲರೂ ಸೇರಿ ಜಾತ್ರೆ ರದ್ದು ಮಾಡಲು ತಿರ್ಮಾನಿಸಿದ್ದಾರೆ.

ಜನರ ಆರೋಗ್ಯವೇ ನಮ್ಮೇಲ್ಲರ ಹೋಣೆ, ಅಲ್ಲದೆ ಮಾಹಾಮಾರಿ ಕೊರೊನಾ ಹರಡುವಿಕೆಯನ್ನು ತಡೆಯಲು ಊರಿನ ಎಲ್ಲಾ ಹಿರಿಯರು ಸೇರಿಕೊಂಡು ಜಾತ್ರೆ ರದ್ದು ಮಾಡಲಾಗಿದೆ. ಹಾಗೂ ಈ ವರ್ಷ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸ ಬಾರದು ಎಂದು ತಿರ್ಮಾನಿಸಲಾಗಿದೆ. ಎಲ್ಲಾ ಭಕ್ತಾದಿಗಳು ಸಹಕರಿಸಬೇಕು ಎಂದು ಜಾತ್ರಾ ಕಮೀಟಿ ಹಾಗೂ ಶ್ರೀ ಕುಲಂಕಾರೇಶ್ವರ ಟ್ರಸ್ಟ ಕಮೀಟಿಯ ಅಧ್ಯಕ್ಷ ಎಸ್. ಬಿ. ಪಾಟೀಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version