ದಿನದ ಸುದ್ದಿ
ಕೊರೋನಾ ಸೋಂಕು | ಮಾಸ್ಕ್, ಸ್ಯಾನಿಟೈಸರ್, ಸೋಪು ಸರಬರಾಜಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವ್ಯಾಪ್ತಿಗೆ ಒಳಪಡುವ ಕಟ್ಟಡ ಕಾರ್ಮಿಕರನ್ನು ಹಾಗೂ ಅಸಂಘಟಿತ ಕಾರ್ಮಿಕರನ್ನು ಕೊರೊನಾ ವೈರಸ್ ಸೋಂಕಿನಿಂದ ತಡೆಯಲು ಅವರಿಗೆ ಅರಿವು ಮೂಡಿಸಲು ಮತ್ತು ವ್ಯಾಪಕ ಪ್ರಚಾರ ನೀಡಲು ಹಾಗೂ ಸ್ಯಾನಿಟೈಸರ್, ಸೋಪ್, ಮತ್ತು ಮಾಸ್ಕ್‍ಗಳನ್ನು ಸರಬರಾಜು ಮಾಡಲು ಅರ್ಹ 4ಜಿ ವಿನಾಯಿತಿಗೆ ಒಳಪಟ್ಟ ಏಜೆನ್ಸಿ ಅಥವಾ ಎನ್‍ಜಿಒ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಕಾರ್ಮಿಕ ಅಧಿಕಾರಿ ಕಚೇರಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ಎಲ್ಲಾ ತಾಲ್ಲೂಕಿನಲ್ಲಿ ಮೇಲ್ಕಂಡ ಕಾರ್ಮಿಕರು ನೆಲೆಸಿರುವ ಕಾಲೋನಿ, ಕಟ್ಟಡ ನಿರ್ಮಾಣ ಸ್ಥಳಗಳು, ಆಟೋರಿಕ್ಷಾ ಸ್ಟ್ಯಾಂಡ್‍ಗಳು, ಮ್ಯಾಕ್ಸಿಕ್ಯಾಬ್ ನಿಲ್ದಾಣಗಳು, ಬೃಹತ್ ರಸ್ತೆ ನಿರ್ಮಾಣ ಇತರ ನಿರ್ಮಾಣ ಸ್ಥಳಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಕಾರ್ಮಿಕರಿಗೆ ಅರಿವು ಮೂಡಿಸಬೇಕು. ಕರ್ನಾಟಕ ಸರ್ಕಾರದಿಂದ 4ಜಿ ವಿನಾಯಿತಿಗೆ ಒಳಪಟ್ಟ ಸಂಸ್ಥೆ ಅಥವಾ ಎನ್‍ಜಿಒಗಳಾಗಿರಬೇಕು.
ಮಾ.26 ರಂದು ಬೆಳಗ್ಗೆ 11.00 ಗಂಟೆ ಒಳಗಾಗಿ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ಅಧಿಕಾರಿ, ದಾವಣಗೆರೆ ಜಿಲ್ಲೆ ದೂಡಾ ಬಿಲ್ಡಿಂಗ್, ಪಿಬಿ ರೋಡ್, ಬಿಎಸ್‍ಎನ್‍ಎಲ್ ಟೆಲಿಪೋನ್ ಆಫೀಸ್ ಹತ್ತಿರ, ದಾವಣಗೆರೆ ಇಲ್ಲಿಯ ಕಚೇರಿಗೆ ಸಲ್ಲಿಸಬೇಕೆಂದು ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243