ದಿನದ ಸುದ್ದಿ
ಕೊರೊನಾ ನಾಲ್ಕನೇ ಅಲೆ ಭೀತಿ : ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಮುಂದುವರಿಕೆ
ಸುದ್ದಿದಿನ ಡೆಸ್ಕ್ : ಜಾಗತಿಕ ಮಟ್ಟದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಆವರಿಸಿರುವ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಮುಂದುವರಿದಿದೆ. ದೇಶದಲ್ಲಿ ಇದುವರೆಗೆ 185ಕೋಟಿ 90 ಲಕ್ಷ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ.
ಒಂದೇ ದಿನದಲ್ಲಿ15 ಲಕ್ಷ 65 ಸಾವಿರ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರದ 889ಇದ್ದು, ಈ ಪ್ರಮಾಣವು ಶೇಕಡ10 ರಷ್ಟಿದೆ. ಸದ್ಯ ಚೇತರಿಕೆ ಪ್ರಮಾಣ ಶೇಕಡ 98.76ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇಕಡ 0.24ಇದ್ದು, ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇಕಡ 0.20ರಷ್ಟಿದೆ. ದೇಶದಲ್ಲಿ ಇದುವರೆಗೆ 79ಕೋಟಿ 45 ಲಕ್ಷ ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 190ಕೋಟಿ 18 ಲಕ್ಷ ಡೋಸ್‌ಗಳನ್ನು ಪೂರೈಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೇರವಾಗಿ ಉಚಿತ ಲಸಿಕೆಗಳನ್ನು ಪೂರೈಸಿದೆ. ರಾಜ್ಯಗಳು ಮತು ಕೇಂದ್ರಾಡಳಿತ ಪ್ರದೇಶಗಳ ಬಳಿ 19ಕೋಟಿ 18ಲಕ್ಷಕ್ಕಿಂತ ಹೆಚ್ಚಿನ ಲಸಿಕಾ ಡೋಸ್‌ಗಳು ಬಾಕಿ ಉಳಿದಿವೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೋವಿಡ್ ಲಸಿಕಾ ಡೋಸ್‌ಗಳ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಟ್ವೀಟ್
➡️India’s cumulative vaccination coverage crosses 186.05 Crore
➡️More than 2.31 Crore Vaccine Doses administered to 12-14 age group so farhttps://t.co/zcy18k4299 pic.twitter.com/CGsvSyUAO7
— Ministry of Health (@MoHFW_INDIA) April 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243