ದಿನದ ಸುದ್ದಿ

ದಾವಣಗೆರೆ ಕೊರೋನಾ | ಇನ್ನು ಎಷ್ಟು ಜನರ ವರದಿ ಬರಬೇಕಿದೆ ಗೊತ್ತಾ..?

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಸೋಮವಾರ ಮೂರು ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, ರೋಗಿ ಸಂಖ್ಯೆ 850 33 ವರ್ಷದ ಪುರುಷ ಇವರು ರೋಗಿ ಸಂಖ್ಯೆ 662 ರ ಪ್ರಾಥಮಿಕ ಸಂಪರ್ಕ. ರೋಗಿ ಸಂಖ್ಯೆ 851 30 ವರ್ಷದ ಮಹಿಳೆ 6663 ರ ಪ್ರಾಥಮಿಕ ಸಂಪರ್ಕ. 852 56 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 667 ರ ಪ್ರಾಥಮಿಕ ಸಂಪರ್ಕ ಹೊಂದಿದ್ದು ಇವರೆಲ್ಲ ಜಾಲಿನಗರ ಕಂಟೈನ್‍ಮೆಂಟ್ ಝೊನ್‍ಗೆ ಒಳಪಟ್ಟಿರುತ್ತಾರೆ. ಹೊಸ ಪ್ರದೇಶದ ಪ್ರಕರಣ ಆಗಿರುವುದಿಲ್ಲ‌ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೋಮವಾರ 240 ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು ಒಟ್ಟು 404 ವರದಿ ಬಾಕಿ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 65 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಸ್‍ಎಸ್ ಆಸ್ಪತ್ರೆಯ ಲ್ಯಾಬ್‍ಗೆ ಅವಶ್ಯಕವಾದ ಲಾಜಿಸ್ಟಿಕ್ ಪೂರೈಕೆ ಇಂದು ಆಗಿದ್ದು ಪರೀಕ್ಷೆಗೆ ಎಲ್ಲ ತಯಾರಿ ನಡೆಸಿಕೊಳ್ಳುತ್ತಿದೆ. ತಯಾರಿ ಪೂರ್ಣಗೊಂಡಲ್ಲಿ ನಾಳೆಯಿಂದಲೇ ಸುಮಾರು 100 ರಿಂದ 150 ಸ್ಯಾಂಪಲ್ ಪರೀಕ್ಷೆಗೆ ಸಿದ್ದವಾಗಿದೆ‌ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version