ದಿನದ ಸುದ್ದಿ
ಕೊರೋನಾದಿಂದಾದ ನಷ್ಟ ತುಂಬಲು 500 ರೂ ಕೋಟಾ ನೋಟು ಪ್ರಿಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದರು
ಸುದ್ದಿದಿನ,ದ.ಕ: ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ ಮತ್ತು ಉಜಿರೆ ಭಾಗದಿಂದ ಕಾರಿನಲ್ಲಿ 500 ಮುಖ ಬೆಲೆಯ ಐದು ಲಕ್ಷದ ಐವತ್ತು ಸಾವಿರ ನಕಲಿ ನೋಟುಗಳನ್ನ ಸಾಗಿಸುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಹಾಂದಿಯಲ್ಲಿ ನ ಸಿಕ್ಕಿಬಿದ್ದಿದ್ದಾರೆ.
ಆ ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ರೆಡ್ ಮಕ್ರ್ಯೂರಿ ಕೊಳ್ಳಲು ಹೋಗುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಚಿಕ್ಕಮಗಳೂರಿನ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಹಳೇ ಟಿವಿ, ರೆಡಿಯೋಗಳಲ್ಲಿ ರೆಡ್ ಮರ್ಕ್ಯೂರಿ ಲಿಕ್ವಿಡ್‍ಗಾಗಿ ಆರೋಪಿಗಳು ಈ ನಕಲಿ ಹಣದೊಂದಿಗೆ ಚಿಕ್ಕಮಗಳೂರಿಗೆ ಬರುತ್ತಿದ್ದರು. ಆರೋಪಿ ಸಂತೋಷ್ ನಿಮಗೆ ರೆಡ್ ಮರ್ಕ್ಯೂರಿ ಕೊಡಿಸೋ ಜವಾಬ್ದಾರಿ ನನ್ನದು, ಅದು ತುಂಬಾ ದುಬಾರಿ, ಹಾಗಾಗಿ ಹಣ ಅರೆಂಜ್ ಮಾಡಿ ಎಂದು ಮತ್ತೊಬ್ಬ ಆರೋಪಿ ನಜೀರ್ ಗೆ ಹೇಳಿದ್ದ.
ಸುದ್ದಿದಿನ.ಕಾಂ|ವಾಟ್ಸಾಪ್|9980346243