ದಿನದ ಸುದ್ದಿ
ತ್ಯಾವಣಿಗೆ,ದೊಡ್ಡಘಟ್ಟ,ನವಿಲೇಹಾಳ್ ಗ್ರಾಮದ ಮೂವರಿಗೆ ಕೊರೋನಾ ಪಾಸಿಟಿವ್
ಸುದ್ದಿದಿನ,ಚನ್ನಗಿರಿ: ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ ತ್ಯಾವಣಿಗೆ, ದೊಡ್ಡಘಟ್ಟ, ನವಿಲೇಹಾಳ್, ಗ್ರಾಮದ ಮೂವರಿಗೆ ಕೋವಿಡ್ ತಗುಲಿದೆ. ನವಿಲೇಹಾಳ್‌ನ 60 ವರ್ಷದ ವೃದ್ಧೆ ಹಾಗೂ ತ್ಯಾವಣಿಗೆ ಗ್ರಾಮದ 42 ವರ್ಷದ ವ್ಯಕ್ತಿಯನ್ನು ದಾವಣಗೆರೆ ಜಿಲ್ಲಾ ಕೋವಿಡ್ ಕೇಂದ್ರದಲ್ಲಿ ದಾಖಲಿಸಲಾಗಿದೆ.
ನವಿಲೇಹಾಳ್ ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಘಟ್ಟ ಗ್ರಾಮದ 68 ವರ್ಷದ ವೃದ್ಧನಿಗೆ ಕೊರೊನಾ ದೃಢವಾಗಿದೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಕುಮಾರ್ ತಿಳಿಸಿದ್ದಾರೆ.
ತ್ಯಾವಣಿಗೆಯ ಮೂವರಿಗೆ ಕೋವಿಡ್ ದೃಢ!
ಸುದ್ದಿದಿನ.ಕಾಂ|ವಾಟ್ಸಾಪ್|9980346243