ದಿನದ ಸುದ್ದಿ

ದಾವಣಗೆರೆ : 5000 ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಸಿದ್ದತೆ : ಆಕ್ಸಿಜನ್ ಬೆಡ್‍ಗಳ ಹೆಚ್ಚಳ..!

Published

on

ಸುದ್ದಿದಿನ,ದಾವಣಗೆರೆ:ಕೊರೊನ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬ ಮಾತ್ರಕ್ಕೆ ಗೆದ್ದ ಭಾವನೆ ಸಲ್ಲದು. ಮುಂಬರುವ ದಿನಗಳು ಇನ್ನೂ ಕಠಿಣಕರವಾಗಿವೆ. ನವೆಂಬರ್‍ನಿಂದ ಚಳಿಗಾಲ ಹೆಚ್ಚಾಗಲಿದ್ದು, ಇನ್ನೊಂದು ವಾರ, ಹದಿನೈದು ದಿನಗಳಲ್ಲಿ ಪ್ರಕರಣ ಹೆಚ್ಚಾಗುವ ಸಂಭವ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದ ಕಾರಣ ಜಿಲ್ಲೆಯಲ್ಲಿ ಒಂದು ದಿನಕ್ಕೆ 5000 ಜನರಿಗೆ ಚಿಕಿತ್ಸೆ ನೀಡಲು ಬೇಕಾದ ಮೂಲಭೂತ ಸೌಕರ್ಯ, ಆಕ್ಸಿಜನ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್, ತಜ್ಞರು, ಕನ್ಸಲ್ಟೆಂಟ್ಸ್, ಸಿಬ್ಬಂದಿಯನ್ನು ತಯಾರಿ ಮಾಡಿಕೊಂಡಿದ್ದೇವೆ. ನ.10 ರಿಂದ 15 ರನಂತರ ಈ ಹಿಂದೆ ವಹಿಸಿದ್ದಕ್ಕಿಂತ 10 ಪಟ್ಟು ಎಚ್ಚರಿಕೆ ವಹಿಸಬೇಕು. ಉಸಿರಾಟ ಸಂಬಂಧಿತ ಕಾಯಿಲೆಗಳು, ಟಿಬಿ, ಅಸ್ತಮಾ, ಪಲ್ಮನರಿ ಕಾಯಿಲೆ, ಅಲರ್ಜಿ ಇರುವವರು, ಮಕ್ಕಳು, ವೃದ್ದರು ಜೊತೆಗೆ ಐಎಲ್‍ಡಿ() ಕೋವಿಡ್ ಬಂದು ಗುಣಮುಖರಾದವರನ್ನೂ ದುರ್ಬಲ ವರ್ಗವೆಂದು ಪರಿಗಣಿಸಿದ್ದು, ಇವರೆಲ್ಲರೂ ಹೆಚ್ಚಿನದಾಗಿ ಜಾಗರೂಕರಾಗಿ ಮುನ್ನೆಚ್ಚರಿಕೆ ವಹಿಸಬೇಕು.

ಆಕ್ಸಿಜನ್ ಬೆಡ್‍ಗಳ ಹೆಚ್ಚಳ

ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಹೆಚ್ಚಿದೆ. ಪ್ರಸ್ತುತ 717 ಆಕ್ಸಿಜನ್ ಬೆಡ್‍ಗಳಿದ್ದು, ಇದರಲ್ಲಿ 38 ಹೆಚ್‍ಎಫ್‍ಓ , 31 ವೆಂಟಿಲೇಟರ್, 20 ನಾನ್‍ಇನ್‍ವೇಸಿವ್ ವೆಂಟಿಲೇಟರ್‍ಗಳಿವೆ. 8000 ರ್ಯಾಪಿಡ್ ಕಿಟ್ಸ್‍ಗಳು ಮತ್ತು 27 ಸಾವಿರ ಆರ್‍ಟಿಪಿಸಿಆರ್ ಕಿಟ್‍ಗಳ ದಾಸ್ತಾನು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version