ದಿನದ ಸುದ್ದಿ
ದಾವಣಗೆರೆ | ಕೊರೋನಾ ಸೋಂಕಿತರಿಗೆ ಪೌಷ್ಟಿಕ ಆಹಾರ
ಸುದ್ದಿದಿನ,ದಾವಣಗೆರೆ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಕೊರೊನಾ ಪಾಸಿಟಿವ್ ರೋಗಿಗಳ ಮತ್ತು ಐಸೋಲೇಷನ್‍ನಲ್ಲಿರುವ ವ್ಯಕ್ತಿಗಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಪೌಷ್ಟಿಕ ಆಹಾರ ನೀಡಲು ತಯಾರಿ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಆಯುಷ್ ಇಲಾಖೆಯ ಖಾದ್ಯಗಳು, ಸಿರಪ್‍ಗಳನ್ನು ನೀಡಲಾಗಿತ್ತಿದೆ ಜೊತೆಗೆ ಮೈಸೂರಿನ ಸಿಎಫ್‍ಟಿಆರ್‍ಐ ನಿಂದ ಪೌಷ್ಟಿಕಾಂಶ ಭರಿತ ಮತ್ತು ವಿಟಮಿನ್ ಸಿ ಹಾಗೂ ಎ ಉಳ್ಳ ಮ್ಯಾಂಗೋ ಬಾರ್‍ಗಳು ಮತ್ತು ಸಮುದ್ರದ ಪಾಚಿ ಅಂಶವುಳ್ಳ ಸ್ಪಿರುಲಿನಾ ಚಿಕ್ಕಿಯನ್ನು ತರಿಸಿಕೊಂಡು ಇವರಿಗೆ ನೀಡಲು ಆ ಸಂಸ್ಥೆಯಿಂದ ಈಗಾಗಲೇ ದರಪಟ್ಟಿ ಆಹ್ವಾನಿಸಲಾಗಿದೆ. ಈ ರೀತಿಯಾಗಿ ರೋಗಿಗಳನ್ನು ಗುಣಮುಖವಾಗುವತ್ತ ಹೆಜ್ಜೆ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243