ದಿನದ ಸುದ್ದಿ

ದಾವಣಗೆರೆಗೆ ಮತ್ತೊಂದು ಶಾಕ್ | 14 ಹೊಸ ಕೇಸ್ ಪತ್ತೆ ; 55 ಆ್ಯಕ್ಟೀವ್ ಕೇಸ್ : ಈ ಕ್ಷಣದ ಕಂಪ್ಲೀಟ್ ಡೀಟೆಲ್ಸ್

Published

on

ಸುದ್ದಿದಿನ, ದಾವಣಗೆರೆ : ಅಕ್ಷರಶಃ ದಾವಣಗೆರೆಗೆ ಕೊರೋನಾದ ಬರ ಸಿಡಿಲು ಬಡಿದಂತಾಗಿದೆ. ಇಂದು (ಶುಕ್ರವಾರ) ಒಂದೇ ದಿನ 14 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಇದರಲ್ಲಿ5 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದ್ದು, ಮಕ್ಕಳಲ್ಲಿ ಒಂದು ಹೆಣ್ಣು ಮಗು, ನಾಲ್ಕು ಗಂಡು ಮಕ್ಕಳಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.

10 ಜನ ಪೆ ನಂ 533ನರ್ಸ್ ಸಂಪರ್ಕದಲ್ಲಿ ಇದ್ದವರಾದರೆ, ಪೆ ನಂ 556 ಸಂಪರ್ಕದಿಂದ 4 ಜನರಿಗೆ ಸೋಂಕು ಬಂದಿದೆ. ಸೋಂಕಿತರಲ್ಲಿ ಇಮಾಮ್ ನಗರದ 10 ಜನ ಜಾಲಿ ನಗರದ 4 ಜನರಿಗೆ ಸೋಂಕು ಧೃಡವಾಗಿದ್ದು, ದಾವಣಗೆರೆಯಲ್ಲಿ55 ಆ್ಯಕ್ಟಿವ್ ಕೇಸ್ ಆಗಿವೆ. ಜೊತೆಗೆ ನಾಲ್ವರ ಸಾವಾಗಿದ್ದರಿಂದ ಬೆಣ್ಣೆ ನಗರಿ ಜನ ಬೆಚ್ಚಿ ಬಿದ್ದಿದ್ದಾರೆ.

ಕೋವಿಡ್19: 2020ರ 7 ಮೇ ಸಂಜೆ 5 ಗಂಟೆಯಿಂದ 8 ಮೇ ಬೆಳಗ್ಗೆ 12 ಗಂಟೆ ಒಳಗಿನ ವರದಿ

  1. ಒಟ್ಟು ಪ್ರಕರಣಗಳು: 61
  2. ಮೃತಪಟ್ಟವರು: 04
  3. ಗುಣಮುಖರಾದವರು: 02
  4. ಹೊಸ ಪ್ರಕರಣಗಳು: 14
  5. ಆ್ಯಕ್ಟಿವ್ ಕೇಸ್: 55

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version