ದಿನದ ಸುದ್ದಿ
ಬ್ರೇಕಿಂಗ್ | ದಾವಣಗೆರೆಯಲ್ಲಿ ಮತ್ತೆ 6 ಹೊಸ ಕೊರೊನಾ ಕೇಸ್ ಪತ್ತೆ : ಕುಟುಂಬದ 6ಮಂದಿ ಸೋಂಕಿತರು
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಇಂದು ಹೊಸದಾಗಿ 6 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.
533ನೇ ಸೋಂಕಿತ ಮಹಿಳೆಯ 16 ವರ್ಷದ ಪುತ್ರನಿಗೂ ಸೋಂಕು ತಗುಲಿದ್ದು, 556ನೇ ಸೋಂಕಿತರ ಸಂಪರ್ಕಕ್ಕೆ ಬಂದ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೊಸದಾಗಿ ಈ 6 ಪ್ರಕರಣಗಳು ಪತ್ತೆಯಾಗಿದ್ದು ಸೊಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ದಾವಣಗೆರೆ ಜಿಲ್ಲೆಯನ್ನು ಮತ್ತಷ್ಟು ಬಿಗಿಗೊಳಿಸುತ್ತೇವೆ. ಕಂಟೇಮೆಂಟ್ ಜೋನನ್ ಮಾಡಿದ್ದೇವೆ, ಎಚ್ಚರಿಕೆ ವಹಿಸಿದ್ದೇವೆ. ಸದ್ಯ ಸೋಂಕಿತರ ಅಕ್ಕಪಕ್ಕದ ಮನೆಯವರ ರಕ್ತದ ಮಾದರಿ, ಗಂಟಲು ದ್ರವ ಪಡೆದು ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243