ದಿನದ ಸುದ್ದಿ

ದಾವಣಗೆರೆ | ಯಾವ ಏರಿಯಾಗಳಲ್ಲಿ ಎಷ್ಟು ಕೊರೊನಾ ಪಾಸಿಟಿವ್ ಕೇಸ್ ಪತ್ತೆ..? ಇಲ್ಲಿದೆ ಮಾಹಿತಿ

Published

on

ಸುದ್ದಿದಿನ, ದಾವಣಗೆರೆ : ಭಾನುವಾರ 21 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು ನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಒಟ್ಟು 31 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ರೆಡ್ ಝೂನ್ ನತ್ತ ಸಾಗುತ್ತಿದೆ.

ಕೊರೊನಾ ಪಾಸಿಟಿವ್ ತಗುಲಿದ್ದ ಜಾಲಿನಗರದ ವೃದ್ಧ (ರೋಗಿ ಸಂಖ್ಯೆ-556) ಮೇ 1ರಂದು ಸಾವೀಗಿಡಾಗಿದ್ದು, ನಿಯಮಾವಳಿಯಂತೆ ಇವರ ಅಂತ್ಯಸಂಸ್ಕಾರವನ್ನು ರಾತ್ರಿಯೇ ನಡೆಸಲಾಯಿತು.ಈ ವೃದ್ದನ ಟ್ರಾವೆಲ್ ಹಿಸ್ಟರಿ ಯನ್ನು ಕಲೆಹಾಕುವಲ್ಲಿ ಜಿಲ್ಲಾಡಳಿತವು ಹರಸಾಹಸ ಪಡುತ್ತಿದೆ.

ನಗರದಲ್ಲಿ ಕೊರೊನಾ ಸೃಷ್ಟಿಸಿರುವ ಆತಂಕದ ಪರಿಣಾಮ, ಜಾಲಿನಗರ, ಭಾಷಾನಗರ ಸೀಲ್ ಡೌನ್ ಮಾಡಲಾಗಿದ್ದು, ಸರಣಿ ಪಾಸಿಟಿವ್ ಕೇಸ್ ಗಳಿಂದ ಹೈ ಅಲರ್ಟ್ ಘೋಷಣೆ ಮಾಡಿದೆ ಜಿಲ್ಲಾಡಳಿತ.

ಯಾವ ಏರಿಯಾಗಳಲ್ಲಿ ಎಷ್ಟು ಪ್ರಕರಣ ಪತ್ತೆ..?

  1. ಜಾಲಿನಗರ – 12 ಕೇಸ್
  2. ಇಮಾಂ ನಗರ – 6 ಕೇಸ್
  3. ಕೆಟಿಜೆ ನಗರ – 1 ಕೇಸ್
  4. ಬೇತೂರು ರೋಡ್ – 1 ಕೇಸ್
  5. ಯಲ್ಲಮ್ಮ ಟೆಂಪಲ್ ಬಳಿ – 1 ಕೇಸ್ ಪತ್ತೆಯಾಗಿದೆ.

ಏಳು ವರ್ಷದ ಬಾಲಕ ಸೇರಿ ಮೂವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು,‌ ಎಂಟು ಜನ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆ 31ಕ್ಕೆ ಏರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version