ದಿನದ ಸುದ್ದಿ

ದಾವಣಗೆರೆಯಲ್ಲಿ ಮಹಿಳೆ ಸಾವು ; ಕೊರೊನಾದಿಂದ ಇಬ್ಬರು ಗುಣಮುಖ

Published

on

ಸುದ್ದಿದಿನ,ದಾವಣಗೆರೆ : ನಗರದಲ್ಲಿ ‌32 ಕೊರೊನಾ ಪಾಸಿಟಿವ್ ಕೇಸ್ ಧೃಡಪಟ್ಟಿವೆ. ಎರಡು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 2 ಸಾವು ಸಂಭವಿಸಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 28 ಇವೆ‌ ಎಂದು ಜಿಲ್ಲಾಧಿಕಾರಿಗಳು ಸೋಮವಾರ ತಿಳಿಸಿದರು.

ಮಹಿಳೆ ಸಾವು

ಸೋಮವಾರ (ರೋಗಿ ಸಂಖ್ಯೆ 651) 48ವರ್ಷದ ಮಹಿಳೆ ದಾವಣಗೆರೆ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡ, ಮಧುಮೇಹ ಹಾಗೂ ಹೈಪೊಥೈರೂಡಿಸಮ್ ಕಾಯಿಲೆಗಳ ಹಿನ್ನೆಲೆಯೊಂದಿಗೆ ಮೇ.1ರಮದು ದಾವಣಗೆರೆ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿ ಮೇ.2ರ ಮಧ್ಯರಾತ್ರಿ 1.50ಕ್ಕೆ ನಿಧನ ಹೊಂದಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version