ದಿನದ ಸುದ್ದಿ

ದಾವಣಗೆರೆ | ಕೊರೊನಾಗೆ ಮೂರು ಬಲಿ : 12 ಹೊಸ ಕೇಸ್ ಪತ್ತೆ ; 2 ಗುಣಮುಖ

Published

on

ಸುದ್ದಿದಿನ,ದಾವಣಗೆರೆ‌ : ನಗರದಲ್ಲಿ ಮಹಾಮಾರಿ ಕೊರೊನಾ ಪ್ರಕರಣ ಮುಂದುವರಿಯುತ್ತಲೇ ಇದೆ. ಮಂಗಳವಾರ ಬರೋಬ್ಬರಿ 12 ಪ್ರಕರಣಗಳು ಪತ್ತೆ ಯಾಗಿವೆ. ಮತ್ತೋರ್ವ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮೂರಕ್ಕೇರಿದೆ.

ದಿನ ದಿನಕ್ಕೂ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದು, ಇದುವರೆಗೂ 44 ಕೊರೊನಾ ಸೋಂಕಿತರು ಪತ್ತೆಯಾಗಿವೆ. 44 ರಲ್ಲಿ ಇಬ್ಬರು ಗುಣಮುಖರಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.

ಉಳಿದ 39 ಮಂದಿಗೆ ಸೋಂಕು ಜಿಲ್ಲಾಡಳಿತದಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 29 ಮತ್ತು 30 ರಂದು ವೃದ್ಧ ಹಾಗೂ ನರ್ಸ್ ಗೆ ಸೋಂಕು ಪತ್ತೆಯಾಗಿತ್ತು. ಇಬ್ಬರು ಸೋಂಕಿತ ಸಂಪರ್ಕ ಹೊಂದಿದವರಿಗೆ ಸೋಂಕು ಪತ್ತೆಯಾಗಿರುವ ಕಾರಣ, ಜಿಲ್ಲೆಯಲ್ಲಿ ಆತಂಕ ಮುಂದುವರೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version