ದಿನದ ಸುದ್ದಿ

ಕೊರೊನಾ ಎರಡನೇ ಅಲೆಯ ಆತಂಕ ; ಮದುವೆ ಸಮಾರಂಭಗಳಿಗೆ ಓರ್ವ ಮಾರ್ಷಲ್ ಯೋಜನೆ : ಸಚಿವ ಸುಧಾಕರ್

Published

on

ಸುದ್ದಿದಿನ,ಬೆಂಗಳೂರು: ನೆರೆ ರಾಜ್ಯದವರು ಕರ್ನಾಟಕಕ್ಕೆ ಬರಲು ನಾವು ಬರಲು ನಿರ್ಬಂಧ ಹೇರಿಲ್ಲ. ಕೊರೊನಾ ತಪಾಸಣೆ ಕಡ್ಡಾಯ ಮಾತ್ರ ಮಾಡಿದ್ದೇವೆ, ಸಹಕರಿಸಬೇಕು. ಮದುವೆ ಸಮಾರಂಭಗಳಿಗೆ ಮಾರ್ಷಲ್ ಯೋಜನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, ಕೇರಳ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆಯ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿಯೂ ಕೊರೊನಾ ಎರಡನೇ ಅಲೆಯ ಆತಂಕವಿದೆ. ಬೆಳಗಾವಿ, ವಿಜಯಪುರ ಡಿಸಿ, ಎಸ್ಪಿ, ಸಿಇಒ ಜೊತೆ ಚರ್ಚೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಪರಿಸ್ಥಿತಿ ಹೇಗಿದೆ. ಮಹಾರಾಷ್ಟ್ರದಿಂದ ಬರುವವರ ತಪಾಸಣೆ ಹೇಗೆ ನಡೆದಿದೆ? ಗಡಿಭಾಗದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಭೀಮಾ ಕೋರೆಂಗಾವ್ ಪ್ರಕರಣ | ತೆಲಂಗಾಣದ ಕವಿ ವರವರ ರಾವ್‌ಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು

ಕೋವಿಡ್ ಲಕ್ಷಣಗಳು ಕಂಡರೆ ತಪಾಸಣೆಗೊಳಪಡಿಸಿಕೊಳ್ಳಿ. ಹೈವೇನಲ್ಲಿ ಚಾಲಕರ ರಿಪೋರ್ಟ್ ಚೆಕ್ ಮಾಡಿಸಿ. ಕೋವಿಡ್ ಟೆಸ್ಟ್ ರಿಪೋರ್ಟ್ ಇದ್ಯಾ, ಇಲ್ವಾ ಚೆಕ್ ಮಾಡಿ ಒಂದು ವೇಳೆ ರಿಪೋರ್ಟ್ ಇಲ್ಲದಿದ್ದರೆ ಒಳಬಿಡಬೇಡಿ. ಚೆಕ್ ಪೋಸ್ಟ್‍ನಲ್ಲಿ ತೀವ್ರ ನಿಗಾವಹಿಸಿ. ನಿಪ್ಪಾಣಿ, ಝಳಕಿ ಚೆಕ್ ಪೋಸ್ಟ್‍ನಲ್ಲಿ ಕಟ್ಟು ನಿಟ್ಟು ಮಾಡಿ ಎಂದು ಬೆಳಗಾವಿ, ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version