ಸಿನಿ ಸುದ್ದಿ
ತ್ರಿಮೂರ್ತಿ ಸಂಗಮದಿಂದ ಹೊರ ಬಂತು ಕೊರೊನಾ ಹಾಡು : ಈ ಸಮಯದ ಸ್ಪೂರ್ತಿ ಇದು ; ಮಿಸ್ ಮಾಡ್ದೆ ನೋಡಿ..!
ಸುದ್ದಿದಿನ ಡೆಸ್ಕ್ : ಕೆಲವು ದಿನಗಳ ಹಿಂದೆಯಷ್ಟೇ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದರು. ಆ ಹಾಡಿಗೆ ಸಂಗೀತ ಸಂಯೋಜಿಸಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದರು. ಜನರಿಂದ ಆ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು.
ಇದರ ಬೆನ್ನಲ್ಲೇ ಯೋಗರಾಜ್ ಭಟ್, ಅರ್ಜುನ್ ಜನ್ಯ, ವಿಜಯ ಪ್ರಕಾಶ್ ತ್ರಿಮೂರ್ತಿಗಳ ಸಂಗಮದಿಂದ ಮತ್ತೊಂದು ಕೊರೊನಾ ಜಾಗೃತಿ ಗೀತೆ ತಯಾರಾಗಿದೆ. ಶನಿವಾರ ಸಂಜೆ ಈ ಹಾಡು ಯ್ಯೂಟೂಬ್ ನಲ್ಲಿ ಬಿಡುಗಡೆಗೊಂಡಿದೆ. ಈ ಹಾಡನ್ನೊಮ್ಮೆ ನೀವೂ ಕೇಳಿ. ಕೊರೊನಾ ಭೀತಿಯಿಂದ ಹೊರ ಬನ್ನಿ.
ಹಾಡಿನ ವಿಡಿಯೋ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ ನೋಡಿ
ನಿರ್ದೇಶಕ ಯೋಗರಾಜ್ ಭಟ್ ಕೊರೊನಾ ಹಾಡಿನ ಬಗ್ಗೆ ಇಷ್ಟೆಲ್ಲಾ ಹೇಳಿದ್ದಾರೆ. ಒಮ್ಮೆ ಓದಿ.
“ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಹಾಗು ನಗರ ಪೋಲಿಸ್ ಆಯುಕ್ತರಾದ ಶ್ರೀ ಭಾಸ್ಕರ್ ರಾವ್ ಅವರು ತಮ್ಮ ಅಮೃತ ಹಸ್ತದಿಂದ ಹಾಡನ್ನು ಬಿಡುಗೊಳಿಸಿ ಮನಃಪೂರ್ವಕವಾಗಿ ಹಾಡನ್ನು ಮೆಚ್ಚಿ ತಂಡದ ಬೆನ್ನುತಟ್ಟಿದ್ದಕ್ಕಾಗಿ ಇಡೀ ತಂಡ ಅವರಿಗೆ ಆಭಾರಿಯಾಗಿದ್ದೇವೆ.
ಅದಾಗಲೇ ಹಾಡನ್ನು ಸಾವಿರಾರು ಮಂದಿ ಮೆಚ್ಚಿ ತಮ್ಮ ಪ್ರತಿಕ್ರಿಯೆಗಳನ್ನು ಕಳುಹಿತ್ತಿರುವುದಕ್ಕಾಗಿ ತಮಗೆಲ್ಲಾ ಅನಂತಾನಂತ ವಂದನೆಗಳು. ಈ ಕೆಟ್ಟ ಪರಿಸ್ಥಿತಿಯಲ್ಲಿ ನಿಮಗೆಲ್ಲಾ ಸ್ಫೂರ್ತಿ ತುಂಬುವ ಪ್ರಯತ್ನ ತಂಡವಾಗಿ ನಾವು ಮಾಡಿದ್ದೇವೆ. ಹಾಡನ್ನು ನಿಮ್ಮ ಪ್ರೀತಿ ಪಾತ್ರರಿಗೆ ತಲುಪಿಸುವ ಮೂಲಕ ನೀವೂ ಅವರಿಗೆ ಸ್ಫೂರ್ತಿ ತುಂಬಬೇಕೆನ್ನುವುದೇ ಈ ಹಾಡಿನ ಉದ್ದೇಶ ಹಾಗು ಇಡೀ ತಂಡದ ಆಶಯ.”
–ಯೋಗರಾಜ್ ಭಟ್
ಸುದ್ದಿದಿನ.ಕಾಂ|ವಾಟ್ಸಾಪ್|9980346243