ದಿನದ ಸುದ್ದಿ
ದಾವಣಗೆರೆ | ಜಿಲ್ಲೆಯಲ್ಲಿ ಒಟ್ಟು 745 ಕೊರೋನಾ ಕೇಸ್ , 158 ಆಕ್ಟೀವ್ ಕೇಸ್
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ಬರೋಬ್ಬರಿ 56 ಕೊರೊನಾ ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 745ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿನ 56 ಕೊರೊನಾ ಪಾಸಿಟಿವ್ ಕೇಸ್ ಗಳಲ್ಲಿ ದಾವಣಗೆರೆ ಒಂದರಲ್ಲಿಯೇ 41 ಕೇಸ್ ಗಳು ಪತ್ತೆಯಾಗಿವೆ. ಶನಿವಾರ 16 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 560ಕ್ಕೆ ಏರಿಕೆಯಾಗಿದೆ.
ಮೂರು ಮಹಿಳೆಯರು ಶನಿವಾರ ಮೃತಪಟ್ಟಿದ್ದು. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 158 ಸಕ್ರಿಯ ಪ್ರಕರಣಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243