ದಿನದ ಸುದ್ದಿ
ದಾವಣಗೆರೆ | ಜಿಲ್ಲೆಯಲ್ಲಿ ಒಟ್ಟು ಎರಡುಸಾವಿರ ಗಡಿ ದಾಟಿದ ಸೋಂಕಿತರು
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 121 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 137 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 2 ಸಾವು ಸಂಭವಿಸಿದೆ.
ಈ ದಿನ ದಾವಣಗೆರೆಯಲ್ಲಿ 69, ಹರಿಹರದಲ್ಲಿ 14, ಜಗಳೂರಿನಲ್ಲಿ 01, ಚನ್ನಗಿರಿ 18, ಹೊನ್ನಾಳಿ 15 ಹಾಗೂ ಅಂತರ್ ಜಿಲ್ಲೆಯಿಂದ 04 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.
ಇಂದು ತಾಲ್ಲೂಕುವಾರು ಬಿಡುಗಡೆಯಾದವರು- ದಾವಣಗೆರೆಯಿಂದ 80, ಹರಿಹರದಿಂದ 13, ಜಗಳೂರಿನಿಂದ17, ಚನ್ನಗಿರಿಯಿಂದ 07, ಹೊನ್ನಾಳಿ 17, ಅಂತರ್‍ಜಿಲ್ಲೆಯಿಂದ 03 ಸೇರಿದಂತೆ ಒಟ್ಟು 137 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲಾವಾರು ರೋಗಿ ಸಂಖ್ಯೆ- ಡಿವಿಜಿ2123, ಡಿವಿಜಿ2104, ಈ ಇಬ್ಬರು ಮರಣ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2098 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1203 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 48 ಸಾವು ಸಂಭವಿಸಿದ್ದು, ಪ್ರಸ್ತುತ 849 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243