ದಿನದ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ದಿಂದ ಶೇ.95ರಷ್ಟು ಮಂದಿ ಗುಣಮುಖ

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಗುಣಮುಖ ಪ್ರಮಾಣ ಶೇ.95 ಇದೆ. ಮರಣ ಪ್ರಮಾಣ ಶೇ.1 ಹಾಗೂ ಸಕ್ರಿಯ ಪ್ರಕರಣಗಳು ಶೇ.4 ಇದೆ. ವೈದ್ಯರ ತಂಡ, ಜಿಲ್ಲಾಡಳಿತ, ಜಿ.ಪಂ, ಪಾಲಿಕೆ ಸೇರಿದಂತೆ ನಮ್ಮ ತಂಡ ತೃಪ್ತಿದಾಯಕ ಕೆಲಸ ಮಾಡುತ್ತಿದೆಯಾದರೂ, ಕÉಲಸ ಮುಗಿದ ಭಾವನೆ ತಂಡದಲ್ಲಿ ಇಲ್ಲ. ಮುಂದೆಯೂ ಹಿಂದಿನಷ್ಟೇ ಸ್ಪೂರ್ತಿಯಿಂದ, ಸಕ್ರಿಯವಾಗಿ ನಮ್ಮ ತಂಡ ಕೆಲಸ ಮಾಡಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಹಬ್ಬ ಹರಿದಿನವೆನ್ನದೇ ನಮ್ಮ ಸಿಬ್ಬಂದಿ ಪರೀಕ್ಷೆಯನ್ನು ನಡೆಸುತ್ತಿದ್ದು, ಡೆತ್ ಪಾಕೆಟ್ಸ್, ಸಂಪರ್ಕಿತರ ಮನೆಗಳ ಸುತ್ತಮುತ್ತ, ಜನಸಂದಣಿ ಇರುವಲ್ಲಿ ಹೆಚ್ಚಿನ ಪರೀಕ್ಷೆ ಮಾಡುತ್ತಿದೆ. ಈ ರೀತಿ ನಮ್ಮ ಕಡೆಯಿಂದ ಸಂಪೂರ್ಣ ತಯಾರಿ ಮಾಡಿಕೊಂಡಿದ್ದರೂ ಜನರು ಮೈಮರೆಯಬಾರದು. ಹೊರಗೆ ಹೋಗುವಾಗ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಹೊರಗೆ ಹೋಗಬಾರದು ಎಂದರು

ಎಲ್ಲರೂ ಕೋವಿಡ್ ವರ್ತನೆಗಳಾದ ಕಡ್ಡಾಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಸ್ವಚ್ಚತೆ(ಸ್ಯಾನಿಟೈಸ್) ಜೊತೆಗೆ ರೋಗ ಬಾರದಂತೆ ಆಯುಷ್ ಔಷಧ, ಇತರೆ ರೊಗನಿರೋಧಕ ಶಕ್ತಿ ಹೆಚ್ಚಿಸುವ ಎಲ್ಲ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಚುನಾವಣೆ, ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ಪ್ರಕರಣ ಕಡಿಮೆಯಾಗಿವೆ ಎಂದು ಮೈಮರೆಯಬಾರದು. ಮೈಮರೆತರೆ ರಿಪೇರಿ ಮಡಲಾರದಂತಹ ಹಾನಿಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version