ದಿನದ ಸುದ್ದಿ
ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಲು ಮನವಿ
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿರುವ ಎಲ್ಲಾ ಫಾರ್ಮಾಸಿಟಿಕಲ್ಸ್, ವೈದ್ಯಕೀಯ ಸಾಧನ ಕೈಗಾರಿಕೆಗಳು ಹಾಗೂ ಬೃಹತ್ ಔಷಧ ಉದ್ಯಮ ಕೈಗಾರಿಕೆಗಳ ಉದ್ಯೋಗಿಗಳು ಈ ಕೂಡಲೇ ಕೆಲಸಕ್ಕೆ ಸ್ವಇಚ್ಚೆಯಿಂದ ಹಾಜರಾಗಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ಕೆಲಸಕ್ಕೆ ಹೋಗಲು ಅವಕಾಶ ಮಾಡಿಕೊಡಬೇಕು ಮನೆ ಮಾಲೀಕರು, ಗ್ರಾಮಸ್ಥರು ಹಾಗೂ ಸಮಾಜದ ಮುಖಂಡರು ಕೆಲಸಕ್ಕೆ ಅಡ್ಡಿಪಡಿಸದೆ ಅವಕಾಶ ಕಲ್ಪಿಸಿಕೊಡಬೇಕು. ಕೆಲಸಗಾರರಿಗೆ ಈ ಬಗ್ಗೆ ಯಾವುದೇ ಆತಂಕ ಬೇಡ. ಯಾಕೆಂದರೆ ಕೆಲಸದ ಸ್ಥಳಗಳಲ್ಲಿ ಅಗತ್ಯ ಶುಚಿತ್ವ ಸೇರಿದಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುವ ಕಾರಣ ಕೆಲಸಕ್ಕೆ ಬರುವ ಯಾವುದೇ ಉದ್ಯೋಗಿಗಳು ಕೊರೊನಾ ವೈರಸ್ ಸೋಂಕಿಗೆ ಒಳಪಡುವ ಸಾಧ್ಯತೆಯಿಲ್ಲ.
ಈ ಕೈಗಾರಿಕೆ ಉದ್ಯಮಗಳ ನೌಕರರು ಕೂಡಲೇ ಕೆಲಸಕ್ಕೆ ಸೇರದಿದ್ದರೆ ಅಥವಾ ಅವರಿಗೆ ಕೆಲಸಕ್ಕೆ ಹೋಗಲು ಅನುಮತಿ ನೀಡದಿದ್ದರೆ, ಜೊತೆಗೆ ಕೆಲಸಕ್ಕೆ ಹೋಗದಂತೆ ಅಡ್ಡಿಪಡಿಸಿದ ವ್ಯಕ್ತಿಗಳು ಕಂಡುಬಂದಲ್ಲಿ 2005ರ ವಿಪತ್ತು ನಿರ್ವಹಣಾ ಕಾಯ್ದೆ ನಿಂಬಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಂಹಾತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243