ಸಿನಿ ಸುದ್ದಿ
ಕೊರೋನಾ ವೈರಸ್ | ಸ್ಟಾರ್ ಗಾಯಕಿಗೆ ವೈದ್ಯರಿಂದ ಕ್ಲಾಸ್
ಸುದ್ದಿದಿನ ಡೆಸ್ಕ್ : ಕೊರೊನಾ ವೈರಸ್ ವಿಚಾರದಲ್ಲಿ ಮೂರ್ಖತನದಿಂದ ವರ್ತಿಸಿ ಟೀಕೆಗೆ ಒಳಗಾಗಿರುವ ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್‌ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ತಪರಾಕಿ ನೀಡಿದೆ. ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ತಾವು ಪಾರ್ಟಿಗಳಲ್ಲಿ ಭಾಗವಹಿಸಿಲ್ಲ, ತಮಗೆ ಯಾರೂ ಪಾರ್ಟಿಗಳಲ್ಲಿ ಭಾಗವಹಿಬಾರದು ಎಂದು ಸಲಹೆ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದ್ದ ಕನಿಕಾ, ಈಗ ಆಸ್ಪತ್ರೆ ವಿರುದ್ಧ ವರಾತ ಆರಂಭಿಸಿದ್ದಾರೆ.
ಆಸ್ಪತ್ರೆಯಲ್ಲಿ ದೂಳು ಇದೆ, ಇಲ್ಲಿ ಸೌಲಭ್ಯ ಇಲ್ಲ, ಜ್ವರ ಇದೆ ಎಂದರೆ ವೈದ್ಯರು ನೋಡುತ್ತಿಲ್ಲ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಸಿರುವ ಆಸ್ಪತ್ರೆ, ಕನಿಕಾ ಅವರಿಗೆ ಆಸ್ಪತ್ರೆಯಲ್ಲಿನ ಅತ್ಯುತ್ತಮ ಸೌಲಭ್ಯವನ್ನು ಒದಗಿಸಲಾಗಿದೆ. ಅವರು ರೋಗಿಯಂತೆ ವರ್ತಿಸಬೇಕೇ ವಿನಾ ಸ್ಟಾರ್ ರೀತಿ ಅಲ್ಲ ಎಂದು ಹೇಳಿದೆ.