ದಿನದ ಸುದ್ದಿ

ಕೊರೋನಾ ಗೆ ರಾಜ್ಯದಲ್ಲಿ ಒಟ್ಟು 9 ಬಲಿ

Published

on

ಸುದ್ದಿದಿನ,ಬೆಂಗಳೂರು: ಕೊರೊನಾಗೆ ಮತ್ತೊಂದು ಬಲಿಯಾಗಿದ್ದು ವಿಜಯಪುರದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ 2 ದಿನದ ಅಂತರದಲ್ಲಿ ಮೂರು ಮಂದಿ ಪ್ರಾಣ ತೆತ್ತಿದ್ದಾರೆ. ಇಂದು 11 ಕೊರೊನಾ ಪಾಸಿಟಿವ್ ಪ್ರಕರಣ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

ವಿಜಯಪುರದ 69 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದರು. ಪತ್ನಿಗೆ ಕೊರೊನಾ ಬಂದಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈಗ ಪರೀಕ್ಷಾ ವರದಿ ಪ್ರಕಟವಾಗಿದ್ದು ಕೊರೊನಾದಿಂದ ಮೃತಪಟ್ಟಿರುವುದು ದೃಢವಾಗಿದೆ.

ಬಾಗಲಕೋಟೆ, ಕಲಬುರಗಿಯ ಮೂವರು, ಬೆಂಗಳೂರಿನ ಇಬ್ಬರು, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರದ, ಬೆಳಗಾವಿ ತಲಾ ಒಬ್ಬರಿಗೆ ಸೋಂಕು ಬಂದಿದೆ. ಕಲಬುರಗಿಯ ತರಕಾರಿ ಮಾರಾಟ ಮಾಡಿದ್ದ ವೃದ್ಧ, ಬೆಂಗಳೂರಿನ 65 ವರ್ಷದ ವೃದ್ಧ ಸೇರಿ ಒಟ್ಟು ಕರ್ನಾಟಕದಲ್ಲಿ 9 ಮಂದಿ ಮೃತಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version