ದಿನದ ಸುದ್ದಿ

ಕೊರೋನ ಬಗ್ಗೆ ಭಯಪೀಡಿತರಾಗದೇ ಇರಲು WHO ಈ 10 ಕಾರಣಗಳನ್ನು ಹೇಳಿದೆ : ಮಿಸ್ ಮಾಡ್ದೆ ಓದಿ

Published

on

WHO ಕೊರೋನ ಬಗ್ಗೆ ಜನರು ಪ್ಯಾನಿಕ್ ಆಗದೆ, ಭಯಪೀಡಿತರಾಗದೇ ಇರಲು ಈ 10 ಕಾರಣಗಳನ್ನು ಹೇಳಿದೆ. ಈ ಕೆಳಗಿನಂತಿವೆ ಓದಿ.

  1. ಇದು ಯಾವ ವೈರಸ್ ಎಂಬುದು ಈಗಾಗಲೇ ನಮಗೆ ತಿಳಿದಿದೆ. 1981ರ ಜೂನ್ ತಿಂಗಳಲ್ಲಿ HIV ಪ್ರಥಮ ಬಾರಿಗೆ ಕಂಡಾಗ ಅದು ಯಾವ ವೈರಸ್ ಎಂಬುದನ್ನು ಪತ್ತೆ ಮಾಡಲೇ ಎರಡು ವರ್ಷ ಬೇಕಾಯ್ತು. ಕೊರೋನ ಹಾಗಲ್ಲ ಇದು ಸಾರ್ಸ್ ಕುಟುಂಬಕ್ಕೆ ಸೇರಿದ್ದು ಎಂದು ಈಗಲೇ ಎಲ್ಲರಿಗೂ ತಿಳಿದಿದೆ.
  2. ಜನವರಿ 13ರಿಂದಲೇ ಈ ವೈರಸ್ಸನ್ನು ಟೆಸ್ಟ್ ಮಾಡುವ ಕಿಟ್ ಲಭ್ಯವಿದೆ.
  3. ಇದು ಪ್ರಥಮ ಬಾರಿಗೆ ಪತ್ತೆಯಾದ ಚೀನಾದಲ್ಲಿ ಈಗ ಪರಿಸ್ಥಿತಿ ಸುಧಾರಿಸುತ್ತಿದೆ.
  4. 81 ಶೇ. ಕೇಸುಗಳಲ್ಲಿ ಇದು ಸಣ್ಣದಾಗಿ ಕಂಡು ಹೊರಟು ಹೋಗುತ್ತದೆ. 14 ಶೇ. ಕೇಸುಗಳಲ್ಲಿ ಮಾತ್ರವೇ ನ್ಯೂಮೋನಿಯಾಗೆ ತಿರುಗುವುದು ಕೇವಲ 5 ಶೇ. ಕೇಸುಗಳಲ್ಲಿ ಮಾತ್ರ ಮಾರಣಾಂತಿಕವಾಗುವುದು.
  5. ಕೋವಿಡ್19 ತಗುಲಿದ ಜನ ಗುಣಮುಖರಾಗುತ್ತಾರೆ. ಸಾಯುವ ಮತ್ತು ಗುಣಮುಖರಾಗುವ ಪ್ರಮಾಣಕ್ಕೆ ಹೋಲಿಸಿದರೆ ಗುಣಮುಖರಾಗುವ ಪ್ರಮಾಣ 13 ಟೈಮ್ಸ್ ಜಾಸ್ತಿ ಇದೆ.
  6. ಯಂಗ್ ಜನರೇಷನ್ಸ್ ಇದಕ್ಕೆ ಸಿಕ್ಕಿ ನಲುಗುವ ಪ್ರಮಾಣ ಕಡಿಮೆ. 20 ವರ್ಷದ ಒಳಗಿನವರಿಗೆ ಇದು ತಗುಲುವ ಪ್ರಮಾಣ ಕೇವಲ 3% ಮತ್ತು 40-50 ವರ್ಷದ ಒಳಗಿನವರಲ್ಲಿ ಮರಣದ ಪ್ರಮಾಣ ಕೇವಲ 0.2%.
  7. ಈ ವೈರಸ್ ಅನ್ನು ಸ್ವಚ್ಛತೆಯಿಂದ ತೊಡೆದು ಹಾಕಬಹುದು. ಕೈಗಳನ್ನು ಸ್ಯಾನಿಟೈಜರ್ ಸೋಪ್ ಬಳಸಿ ತೊಳೆಯುವುದರಿಂದ ಇದನ್ನು ಹಾಗೆಯೇ ತೆಗೆಯಬಹುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಬಾರದಂತೆ ತಡೆಯಬಹುದು.
  8. ಪ್ಲೇಗ್ ಸಿಡುಬು ಕಾಲರಾ ಇನ್ಫ್ಲೂಯೆಂಜಾ ಬಂದಾಗ ಇದ್ದಂತ ಕ್ರಿಟಿಕಲ್ ವೈಜ್ಞಾನಿಕ ಸನ್ನಿವೇಶ ಈಗಿಲ್ಲ. ಎಲ್ಲಾ ರಾಷ್ಟ್ರಗಳೂ ವೈಜ್ಞಾನಿಕವಾಗಿ ಮುಂದುವರಿದಿವೆ.
  9. ಈಗಾಗಲೇ ಇದಕ್ಕೆ ಪ್ರೊಟೋಟೈಪ್ ವ್ಯಾಕ್ಸಿನ್ ಇವೆ. ಅಲ್ಲದೇ ಹೊಸ ವ್ಯಾಕ್ಸಿನ್ ಗಳನ್ನು ಕಂಡುಹಿಡಿಯುವತ್ತ ಶ್ರಮಿಸುತ್ತಿದ್ದಾರೆ.
  10. ಆ್ಯಂಟಿವೈರಲ್ ಟ್ರಯಲ್ ನಡೆಯುತ್ತಿದ್ದು 80ಕ್ಕೂ ಹೆಚ್ಚು ಟ್ರಯಲ್ ಗಳು ನಡೆದು ಸಧ್ಯದಲ್ಲೇ ಪ್ರಿವೆಂಟಿವ್ ಮೆಷರ್ಸ್ ಕಂಡುಹಿಡಿಯುವ ದಾರಿಯಲ್ಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version