ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿಂದು 41 ಕೊರೊನಾ ಪಾಸಿಟಿವ್ 195 ಮಂದಿ ಗುಣಮುಖ 01 ಸಾವು : ಇದುವರೆಗೆ ಗುಣಮುಖರಾದವರೆಷ್ಟು ಗೊತ್ತಾ..?
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 41 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 195 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಮತ್ತು 01 ಸಾವು ಸಂಭವಿಸಿದೆ.
ಈ ದಿನ ದಾವಣಗೆರೆಯಲ್ಲಿ 18, ಹರಿಹರ 09, ಜಗಳೂರು 00, ಚನ್ನಗಿರಿ 06, ಹೊನ್ನಾಳಿ 08, ಅಂತರ್ ಜಿಲ್ಲೆಯಿಂದ 00 ಸೇರಿದಂತೆ ಒಟ್ಟು 41 ಪ್ರಕರಣಗಳು ಇಂದು ವರದಿಯಾಗಿದೆ.
ಈ ದಿನ ತಾಲೂಕವಾರು ಬಿಡುಗಡೆಯಾದವರು ದಾವಣಗೆರೆ 83, ಹರಿಹರ 38 , ಜಗಳೂರು 11, ಚನ್ನಗಿರಿ 27, ಹೊನ್ನಾಳಿ 31, ಅಂತರ್ ಜಿಲ್ಲೆಯಿಂದ 05, ಒಟ್ಟು 195 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರೋಗಿಸಂಖ್ಯೆ ಡಿವಿಜಿ 19165 45 ವರ್ಷದ ಮಹಿಳೆ ಮರಣ ಹೊಂದಿರುತ್ತಾರೆ.
ಒಟ್ಟು 19180 ಪ್ರಕರಣಗಳು ದಾಖಲಾಗಿದ್ದು 17694 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ ಹಾಗೂ 251 ಸಾವು ಸಂಭವಿಸಿದ್ದು ಪ್ರಸ್ತುತ 1235 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243