ದಿನದ ಸುದ್ದಿ

ದಾವಣಗೆರೆ | ಕೊರೋನಾ ಸೋಂಕಿತೆ ಗರ್ಭಿಣಿಗೆ ಬಾಷಾನಗರ, ಜಾಲಿನಗರದ ನಂಟು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 09 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 03 ಪ್ರಕರಣ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮತ್ತು 06 ಪ್ರಕರಣಗಳು ಹರಿಹರ ನಗರದ ಅಗರಸಬೀದಿಗೆ ಸಂಬಂಧಪಟ್ಟಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ರೋಗಿ ಸಂಖ್ಯೆ-9216 12 ವರ್ಷದ ಬಾಲಕಿ ಮತ್ತು ರೋಗಿ ಸಂಖ್ಯೆ-9217 55 ವರ್ಷದ ಮಹಿಳೆ ರೋಗಿ ಸಂಖ್ಯೆ-9218 7 ವರ್ಷದ ಬಾಲಕಿ ರೋಗಿ ಸಂಖ್ಯೆ-9219 50 ವರ್ಷದ ಪುರುಷ ರೋಗಿ ಸಂಖ್ಯೆ-9220 40 ವರ್ಷದ ಮಹಿಳೆ ರೋಗಿ ಸಂಖ್ಯೆ-9221 8 ವರ್ಷದ ಬಾಲಕಿ ರೋಗಿ ಸಂಖ್ಯೆ-9222 16 ವರ್ಷದ ಬಾಲಕಿ ರೋಗಿ ಸಂಖ್ಯೆ-9223 70 ವರ್ಷದ ವೃದ್ದ ರೋಗಿ ಸಂಖ್ಯೆ-9224 32 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ-8065 ರ ಸಂಪರ್ಕಿತರು.

ಜಿಲ್ಲೆಯಲ್ಲಿ ಒಟ್ಟು 265 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 220 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು ಸಂಭವಿಸಿದ್ದು, ಪ್ರಸ್ತುತ 38 ಸಕ್ರಿಯ ಪ್ರಕರಗಣಗಳು ಇವೆ.

09 ಪಾಸಿಟಿವ್ ಇರುವ ಪ್ರಕರಣಗಳ ಪೈಕಿ ಅಗಸರ ಬೀದಿಯ ಒಬ್ಬರು ಗರ್ಭಿಣಿಯಿದ್ದು, ಇವರು ಎಎನ್‍ಸಿ ಪರೀಕ್ಷೆಗೆ ಬಂದಾಗ ಕೊರೊನಾ ಇರುವುದು ದೃಢಪಟ್ಟಿದೆ ಹಾಗೂ ಇವರ ಕುಟುಂಬದವರ ಸ್ವಾಬ್ ಟೆಸ್ಟ್ ಮಾಡಿಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇವರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

ಪ್ರಾಥಮಿಕ ವರದಿ ಪ್ರಕಾರ ಇವರು ದಾವಣಗೆರೆಯ ಬಾಷಾನಗರ ಮತ್ತು ಜಾಲಿನಗರಗಳಿಗೆ ಬಂದು ಹೋಗುತ್ತಿದ್ದರೆಂದು ತಿಳಿದು ಬಂದಿದೆ. ಹಾಗೂ ಇವರ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವನ್ನಾಗಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಚನ್ನಗಿರಿಯಲ್ಲಿ ಗೌಡರಬೀದಿ ಮತ್ತು ಕುಂಬಾರ ಬೀದಿಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಎರಡು ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version