ದಿನದ ಸುದ್ದಿ

ಕೊರೋನಾ ಸೋಂಕಿತರ ಪತ್ತೆಯಲ್ಲಿ ಮುಂಬೈ ನಗರಿಯನ್ನು ಮೀರಿಸಿದ ಬೆಂಗಳೂರು..!

Published

on

ಸುದ್ದಿದಿನ, ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ದೇಶದಲ್ಲಿಯೇ ಬೆಂಗಳೂರು ನಗರ ಕೊರೋನಾ ಪ್ರಕರಣದಲ್ಲಿ ಮುಂದುವರಿಯುತ್ತಿದೆ. ಕೊರೋನಾ ಸೋಂಕಿತರ ಪತ್ತೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮುಂಬೈಯನ್ನು ಸಿಲಿಕಾನ್ ಸಿಟಿ ಬೆಂಗಳೂರು ಹಿಂದಿಕ್ಕಿದೆ.

ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷದ ಆಸುಪಾಸಿನಲ್ಲಿದೆ. ದಿನಕ್ಕೆ ಬೆಂಗಳೂರಲ್ಲಿ 3 ಸಾವಿರ ಕೊರೋನಾ ಪ್ರಕಾರಣಗಳು ಪತ್ತೆಯಾಗುತ್ತಿವೆ. 2 ಸಾವಿರಕ್ಕೂ ಹೆಚ್ಚು ಜನರು ಕೊರೋನಾ ದಿಂದ ಸಾವನ್ನಪ್ಪಿದ್ದಾರೆ. ಆ ಕಾರಣಕ್ಕಾಗಿಯೇ ಬೆಂಗಳೂರು ಐಟಿಬಿಟಿ ಸಿಟಿ ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಬಂದಿದೆ.

ಮುಂಬೈನಲ್ಲಿ ಒಟ್ಟು ಕೊರೋನಾ ಪ್ರಕರಣಗಳು 1,73,596 ಪತ್ತೆಯಾಗುತ್ತಿದ್ದು, ಇದರಲ್ಲಿ 1,34,066 ಮಂದಿ ಗುಣಮುಖರಾಗುತ್ತಿದ್ದಾರೆ. 39,530 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ ಒಟ್ಟು 1,80,283 ಕೊರೊನಾ ಪ್ರಕರಣಗಳಿದ್ದು, 1,38,283 ಮಂದಿ ಗುಣಮುಖರಾಗಿದ್ದಾರೆ. ಇನ್ನು 42,000 ಪ್ರಕರಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version