ದಿನದ ಸುದ್ದಿ

ಕೇರಳದ ವಿದ್ಯಾರ್ಥಿಯಲ್ಲಿ ಕೊರೋನಾ ವೈರಸ್​ ಪತ್ತೆ : ತೀವ್ರ ಆತಂಕದಲ್ಲಿ ಭಾರತ

Published

on

ಸುದ್ದಿದಿನ, ಬೆಂಗಳೂರು : ಕೇರಳದ ವಿದ್ಯಾರ್ಥಿಯಲ್ಲಿ ಕೊರೋನಾ ವೈರಸ್​ ಪತ್ತೆ ಆಗ್ತಿದ್ದಂತೆ ಭಾರತದಲ್ಲಿ ತೀವ್ರ ಆತಂಕ ಹೆಚ್ಚುತ್ತಿದೆ. ಚೀನಾ ಪ್ರವಾಸದಲ್ಲಿರುವ ಕೇರಳ ಮೂಲದ ವಿದ್ಯಾರ್ಥಿಗೆ ಕರೋನಾ ಇರುವುದು ನಿನ್ನೆ ದೃಢ ಪಟ್ಟಿತ್ತು. ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಹೊರ ಹಾಕುತ್ತಿದ್ದಂತೆ ಎಲ್ಲಾ ರಾಜ್ಯಗಳಲ್ಲೂ ಹೈ ಅಲರ್ಟ್​ ಮಾಡಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದು, ನಿನ್ನೆಯೇ ಮಹತ್ವದ ಸಭೆ ನಡೆದಿದೆ. ಕರ್ನಾಟಕದಲ್ಲೂ ಮುನ್ನೆಚ್ಚರಿಕೆ ವಹಿಸಲಾಗ್ತಿದ್ದು ಜಿಲ್ಲಾ ಆಸ್ಪತ್ರೆಗಳು ಮತ್ತು ತಜ್ಞ ವೈದ್ಯರ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್​​​​ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ರಾಜ್ಯದ 17 ಕಡೆಗಳಲ್ಲಿ ಐಸೋಲೇಷನ್​​​​​ ವಾರ್ಡ್​ಗಳನ್ನು ತೆರೆಯಲು ಸೂಚಿಸಲಾಗಿದೆ.
ಇನ್ನು ಶಂಕಿತ ಪ್ರಕರಣ ಕಂಡು ಬಂದರೆ ಈ ವಾರ್ಡ್​ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ ತೆರೆಯಲು ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ದೆಹಲಿ, ಕೋಲ್ಕತ್ತಾ ನಗರಗಳಲ್ಲಿ ವಿದೇಶಿ ಪ್ರವಾಸಿಗರು, ವಿದೇಶಗಳಿಂದ ಬರುವವರ ಮೇಲೆ ತೀವ್ರ ನಿಗಾ
ಇಡಲಾಗಿದೆ.

ಇತ್ತ ಚೀನಾದಲ್ಲಿ ಈವರೆಗೆ ಕೊರೋನಾ ಮಾರಿಗೆ 213 ಮಂದಿ ಸಾವನ್ನಪ್ಪಿದ್ದಾರೆ, 9000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಚೀನಾದ ಹುವಾನ್​​ನಲ್ಲಿರೋ 600ಕ್ಕೂ ಹೆಚ್ಚು ಭಾರತೀಯರನ್ನು ದೇಶಕ್ಕೆ ವಾಪಸ್​ ಕರೆತರೋ ಪ್ರಯತ್ನಕ್ಕೆ ಇವತ್ತಿನಿಂದ ಚಾಲನೆ ಸಿಗಲಿದೆ. ಇವತ್ತು 315 ಮಂದಿಯ ಮೊದಲ ತಂಡವನ್ನು ವಿಶೇಷ ವಿಮಾನದಲ್ಲಿ ಕರೆತರಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version