ದಿನದ ಸುದ್ದಿ

ಕಲಬುರಗಿ : ಮತ್ತೆ ಮೂವರಿಗೆ ಕೊರೋನಾ ಸೋಂಕು

Published

on

ಸುದ್ದಿದಿನ,ಕಲಬುರಗಿ : ನಗರದ ಇಬ್ಬರು ಯುವಕರು ಮತ್ತು ಓರ್ವ ಯುವತಿಗೆ ಗುರುವಾರ ಕೊರೋನಾ ಸೋಂಕು‌ ಕಂಡುಬಂದಿದೆ.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ರೋಗಿ ಸಂಖ್ಯೆ-642 ನೇರ ಸಂಪರ್ಕದಲ್ಲಿ ಬಂದ ಕಲಬುರಗಿ ನಗರದ ಕರೀಂ ನಗರದ 35 ವರ್ಷದ ಯುವಕ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದಾನೆ. ಅದೇ ರೀತಿ ಕಲಬುರಗಿ ನಗರದ ರೋಗಿ ಸಂಖ್ಯೆ-641ರ ಸಂಪರ್ಕದಲ್ಲಿ ಬಂದ ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಯುವತಿ ಮತ್ತು 41 ವರ್ಷದ ಪುರುಷ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 67 ರೋಗಿಗಳಲ್ಲಿ 6 ಜನ ನಿಧನ‌ರಾಗಿದ್ದು, 29 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 32 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version