ದಿನದ ಸುದ್ದಿ
ದಾವಣಗೆರೆಯಲ್ಲೊಂದು ಅಮಾನವೀಯ ನಡೆ | ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯನ್ನು ಜೆಸಿಬಿ ಬಳಸಿ ಶವಸಂಸ್ಕಾರ : ಡಿಸಿ ನೋಟಿಸ್
ಸುದ್ದಿದಿನ,ದಾವಣಗೆರೆ :ಸತ್ತ ಮೇಲೆ ನೂರಾರು ಜನ ಮೆರವಣಿಗೆ ಮಾಡಿ ಕಳುಹಿಸಿಕೊಡಬೇಕು ಎಂದು ಪ್ರತಿಯೊಬ್ಬರದ್ದು ಕೊನೆ ಆಸೆಯಾಗಿರುತ್ತೆ ಆದರೆ ಈ ಕೋವಿಡ್ ಬಂದು ಸಾವನ್ನಪ್ಪಿದರೆ ಮಾತ್ರ ಯಾರು ಕೂಡ ಊಹಿಸಲಾಗದಷ್ಟೆ ಮಟ್ಟಿಗೆ ನಮ್ಮ ಶವಸಂಸ್ಕಾರ ಇರುತ್ತೆ.
ಇದಕ್ಕೆ ಸತ್ಯವಾದ ನಿದರ್ಶನ ಇಲ್ಲಿ ಲಭ್ಯವಾಗಿದ್ದು, ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ 56 ವರ್ಷದ ವೃದ್ದೆ ಕಳೆದ 17 ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.ಅವರಿಗೆ ಸೋಂಕು ಇರುವುದು ಕೂಡ ಅಂದೇ ದೃಡಪಟ್ಟಿತ್ತು, ಈ ಹಿನ್ನಲೆ ಅವರನ್ನು ಚನ್ನಗಿರಿ ಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ಮಾಡಿಲಾಗಿತ್ತು.
ಆದರೆ ಅಂತ್ಯ ಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನುಸರಿಸಿದ ಕ್ರಮವನ್ನು ನೋಡಿದ್ರೆ ಯಾರು ಕೂಡ ಕೋವಿಡ್ ನಿಂದ ಸಾಯಬಾರದು ಎನ್ನುವಂತಹ ಭಯ ಹುಟ್ಟುತ್ತದೆ. ಯಾಕಂದ್ರೆ ಜೆಸಿಬಿ ಮೂಲಕ ಮೃತ ದೇಹವನ್ನು ಎತ್ತಿಕೊಂಡು ಹೋಗಿ ಕಸವನ್ನು ಬಿಸಾಕುವ ಹಾಕಿ ಬಿಸಾಕಿ ಮಣ್ಣುಮುಚ್ವಿರುವ ಹೀನಾಯ ದೃಶ್ಯ ನೋಡಿದ್ರೆ ಎಂಥವರ ಎದೆಯಲ್ಲಿ ಭಯ ಶುರುವಾಗುವುದು ಕಾಮನ್.
ಅಲ್ಲದೆ ಈ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಮದ ವಾಗಿದೆ. ಅಲ್ಲದೆ ವೃದ್ದೆಯ ಮೃತದೇಹವನ್ನು ದಪನ್ ಮಾಡುವಾಗ ಸಿಪಿಐ ಆರ್ ಆರ್ ಪಾಟೀಲ್, ಹಾಗೂ ತಹಶಿಲ್ದಾರ್ ಪುಟ್ಟರಾಜು ಗೌಡ ಸೇರಿದಂತೆ ಹಲವು ತಾಲ್ಲೂಕಮಟ್ಟದ ಆರೋಗ್ಯ ಅಧಿಕಾರಿಗಳು ಇದ್ದರು. ಅವರ ಎದುರೇ ಈ ರೀತಿಯಾದ ಹೀನಾಯವಾಗಿ ವೃದ್ದೆಯ ಮೃತದೇಹವನ್ನು ದಪನ್ ಮಾಡಿದ್ದಾರೆ.
ಇದಕ್ಕೆ ಸ್ಪಷ್ಡನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇದುವರೆಗೂ ಸಾವನ್ನಪ್ಪಿದ ಸೋಂಕಿತರು ಅಂತ್ಯಕ್ರಿಯೆಯನ್ನು ಸರ್ಕಾರದ ಅದೇಶದಂತೆ, ಕೋವಿಡ್ ನಿಯಮಾವಳಿ ಗಳ ಪ್ರಕಾರವೇ ಮಾಡಲಾಗಿದೆ. ಏನಾದ್ರು ಲೋಪದೋಷ ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ತಾಹಶೀಲ್ದಾರ್, ತಾಲ್ಲೂಕು ಅರೋಗ್ಯಧಿಕಾರಿ, ಸೇರಿದಂತೆ ನಾಲ್ಕು ಜನರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದರುಏನೇ ಆಗಲಿ ಈ ರೀತಿ ಕೋವಿಡ್ ಸೋಂಕು ಬಂದು ಸಾವನ್ನಪ್ಪಿದವರನ್ನು ಹೀಗೆ ಕಸದ ರೀತಿ ಹಾಕಿ ಅಂತ್ಯಕ್ರಿಯೆ ಮಾಡುವುದು ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವ ಕೆಲಸವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243