ದಿನದ ಸುದ್ದಿ
ಮನಕಲಕುವ ಘಟನೆ | ಪತಿ – ಪತ್ನಿ ಕೊರೋನಾದಿಂದ ಸಾವು : ಒಬ್ಬ ಪುತ್ರ ಕೂಡಾ ಕೊರೋನಾದಿಂದ ಆಸ್ಪತ್ರೆಗೆ ದಾಖಲು
ಸುದ್ದಿದಿನ,ಹಾಸನ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪತಿಯು ಕೊರೋನಾದಿಂದ ಸತ್ತ ಮರುದಿನವೇ ಪತ್ನಿಯೂ ಕೂಡಾ ಕೂರೋನಾ ಸೋಂಕಿನಿಂದ ಸಾವನ್ನಪ್ಪಿರುವರುವ ಘಟನೆ ಹಾಸನದಲ್ಲಿ ನಡೆದಿದೆ.
ಅಷ್ಟೇ ಅಲ್ಲದೇ ಈ ದಂಪತಿಗಳಿಗೆ ಒಬ್ಬನೇ ಮಗನಿದ್ದು, ಈಗ ಆತನೂ ಕೂಡ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಇಡೀ ಕುಟುಂಬವು ಕೊರೋನಾ ಸೋಂಕಿಗೆ ಕಂಗೆಟ್ಟು ಹೋಗಿದೆ. ಮೃತ ವ್ಯಕ್ತಿ ಮಂಜುನಾಥ ಎಂಬುವವರು ದೇವಾಲಯವೊಂದರ ಅರ್ಚರಾಗಿದ್ದರು. ಮತ್ತು ಅವರ ಪತ್ನಿ ಸ್ವರ್ಣ ಎಂಬುವವರು ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243