ದಿನದ ಸುದ್ದಿ
ಈ ಜಿಲ್ಲೆಯಲ್ಲಿಂದು ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣವಿಲ್ಲ
ಸುದ್ದಿದಿನ,ರಾಯಚೂರು : ದೇವದುರ್ಗ ತಾಲೂಕಿನಿಂದ 304, ಲಿಂಗಸೂಗೂರು ತಾಲೂಕಿನಿಂದ 70, ಮಾನ್ವಿ ತಾಲೂಕಿನಿಂದ158, ಸಿಂಧನೂರು ತಾಲೂಕಿನಿಂದ 181ಮತ್ತು ರಾಯಚೂರು ತಾಲೂಕಿನಿಂದ700 ಸೇರಿದಂತೆ ಮೇ.24 ರ ಭಾನುವಾರ 1,413 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋವಿಡ್-19 ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ 673 ನೆಗೆಟಿವ್ ಆಗಿದ್ದು, ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ10,498 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ5,878 ವರದಿಗಳು ನೆಗೆಟಿವ್ ಆಗಿವೆ. ರೋಗ ಲಕ್ಷಣಗಳಿಲ್ಲದ ಕಾರಣ 6 ವರದಿಗಳು ತಿರಸ್ಕೃತಗೊಂಡಿವೆ ಮತ್ತು ಉಳಿದ 4,548ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243