ದಿನದ ಸುದ್ದಿ
ಬಾರ್ ಓಪನ್ ಮಾಡಿದರೆ ಒಳಿತು : ಸಿಎಂಗೆ ಅಧಿಕಾರಿಗಳ ಮನವಿ
ಸುದ್ದಿದಿನ, ಬೆಂಗಳೂರು : ಅರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಬಗ್ಗೆ ಅರ್ಥಿಕ ಇಲಾಖೆಯ ಅಧಿಕಾರಿಗಳು, ಬಾರ್ ಒಪನ್ ಮಾಡಿದರೆ ಒಳಿತು ಎಂದು ಸಿಎಂ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಮನವಿ ಮಾಡಿದರು.
ಮೇ ಮೂರಕ್ಕೆ ಪಿಎಂ ಭಾಷಣ ಮಾಡಿ ಒಪನ್ ಮಾಡಿ ಅಂದ್ರೆ ಮಾತ್ರ ಬಾರ್ ಒಪನ್ ಮಾಡುತ್ತೇವೆ ಎಂದರೆ ಮಾಡುತ್ತೇವೆ ಎಂದರು ಸಿಎಂ ಯಡಿಯೂರಪ್ಪ. ನಂತರ ಅಧಿಕಾರಿಗಳು ಎಂಎಸ್ಐಎಲ್ ಆದ್ರೂ ಬಾರ್ ಒಪನ್ ಮಾಡಿ, ಹಾಗೇ ಗ್ರೀನ್ ಝೋನ್ ಏರಿಯಾಗಳಲ್ಲಿ ಮಾಡಿದ್ರೆ ಒಳಿತು ಎಂದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆನೀಡಿ ಅಂಗಡಿ ಒಪನ್ ಮಾಡುವ ಬಗ್ಗೆ ಮತ್ತೊಮ್ಮೆ ಮನವಿ ಮಾಡಿದರು.
ಅಧಿಕಾರಿಗಳ ಈ ಮನವಿಗೆ ಆಸಕ್ತಿ ತೋರಿಸದ ಸಿಎಂ ಯಡಿಯೂರಪ್ಪ ಅವರು, ಕೇಂದ್ರದ ನಿರ್ಧಾರ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನರ ಎಂದರು. ಬಾರ್ ಬಿಟ್ಟು ಉಳಿದ ಮನವಿಗಳಿಗೆ ಸಿಎಂ ಒಪ್ಪಿಗೆ ಸೂಚಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243