ದಿನದ ಸುದ್ದಿ
ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಿನಕ್ಕೆ 15 ಸಾವಿರ ರೂ ನಿಗದಿ ಪ್ರಸ್ತಾವ, ಜನರನ್ನು ಸಾವಿನದವಡೆಗೆ ನೂಕಿದಂತೆ : ಸಿದ್ದರಾಮಯ್ಯ
ಸುದ್ದಿದಿನ, ಬೆಂಗಳೂರು: ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಈ ಅವಕಾಶವನ್ನು ಖಾಸಗಿ ಆಸ್ಪತ್ರೆಗಳು ದುರ್ಬಳಕೆ ಮಾಡಿಕೊಂಡು ರೋಗಿಗಳ ಸುಲಿಗೆ ಮಾಡದ ರೀತಿಯಲ್ಲಿ ಮುಖ್ಯಮಂತ್ರಿಗಳು ನಿಗಾ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಆರೋಗ್ಯ ಸೇವಾ ಸಂಘಗಳ ಒಕ್ಕೂಟ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ದಿನದ ಚಿಕಿತ್ಸೆಗೆ ರೂ.15,000, ಆಮ್ಲಜನಕ ಪೂರೈಕೆ ಚಿಕಿತ್ಸೆಗೆ ರೂ.20,000, ವೆಂಟಿಲೇಟರ್ ಸೇವೆಗೆ ರೂ.35,000 ರೂಪಾಯಿ ನಿಗದಿಪಡಿಸಿರುವ ಪ್ರಸ್ತಾವವನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡರೆ ಜನರನ್ನು ಸಾವಿನ ದವಡೆಗೆ ನೂಕಿದಂತೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243