ದಿನದ ಸುದ್ದಿ

ಲಾಕ್‌ಡೌನ್ : ಕಾರ್ಮಿಕ ಫಲಾನುಭವಿಗಳಿಗೆ 2000 ರೂ. ಜಮಾ

Published

on

ಸುದ್ದಿದಿನ,ಕೊಪ್ಪಳ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಒಟ್ಟು 59,670 ಕಾರ್ಮಿಕ ಫಲಾನುಭವಿಗಳಿಗೆ ತಲಾ 2000 ರೂ. ಧನಸಹಾಯವನ್ನು ಅವರ ಖಾತೆ ಜಮೆ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಮತ್ತು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್-25 ರಿಂದ ಸರ್ಕಾರವು ಲಾಕ್‌ಡೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ 2000 ರೂ. ನಂತೆ ಒಟ್ಟು 59,670 ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗಿರುತ್ತದೆ ಹಾಗೂ ಬಾಕಿ ಉಳಿದ 11,688 ಫಲಾನುಭವಿಗಳ ವಿವರದ ಪಟ್ಟಿಯನ್ನು ಮಂಡಳಿ ಮತ್ತು ಬ್ಯಾಂಕಿಗೆ ಕಳುಹಿಸಲಾಗಿದ್ದು, ಇವರಿಗೆ ಮುಂದಿನ ದಿನಗಳಲ್ಲಿ 2000 ರೂ. ಧನಸಹಾಯವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version