ದಿನದ ಸುದ್ದಿ

ಕೋವಿಡ್-19 | “ನಿಮ್ಮ ಋಣ ನಾನು ಮರೆಯೋದಿಲ್ಲ” ಅಂದ್ರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವ್ಯಕ್ತಿ

Published

on

ಸುದ್ದಿದಿನ,ಬಳ್ಳಾರಿ : ಕೋವಿಡ್‌ನನಿಂದ ಜಿಲ್ಲೆಯ ಮತ್ತೊರ್ವ ಮಂಗಳವಾರ ಗುಣಮುಖರಾದ ಹಿನ್ನಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಮಂಗಳವಾರ ಸಂಜೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 12ಕ್ಕೇರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 4ಕ್ಕೇ ಇಳಿದಿದೆ.

ಗುಣಮುಖರಾಗಿ ಹೊರಬಂದ ಪಿ- 113 ಅವರು ಮಾತನಾಡಿ, “ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು ಮತ್ತು ಸ್ಥೈರ್ಯ ಜನನ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಋಣ ನಾನೆಂದು ಮರೆಯುವುದಿಲ್ಲ” ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version