ದಿನದ ಸುದ್ದಿ

ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಜನ ಮಾಹಿತಿ ನೀಡ್ತಿಲ್ಲ ; ಲಸಿಕೆ ಹಾಕಿಸಿಕೊಳ್ಳೋಕೆ ಒಪ್ತಿಲ್ಲ.‌.!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು: ಕೊರೋನಾ ಎರಡನೇ ಅಲೆಯ ಆತಂಕದ ಮಧ್ಯೆ ಸಾರ್ವಜನಿಕರಿಗೆ ಕೋವಿಡ್-19 ವ್ಯಾಕ್ಸಿನ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಹೈ ರಿಸ್ಕ್ ಕೇಸ್ ಮತ್ತೆ 50 ವರ್ಷ ಮೇಲ್ಪಟ್ಟವರ ಪಟ್ಟಿಯನ್ನು ಸಿದ್ಧಗೊಳಿಸಲು ಆರೋಗ್ಯ ಇಲಾಖೆಯು ಹರಸಾಹಸ ಪಡುತ್ತಿದೆ.

ಮನೆ ಮನೆಗಳ ಸರ್ವೇ ವೇಳೆ ಕೋವಿಡ್-19 ವ್ಯಾಕ್ಸಿನ್ ಡೇಟಾ ಎಂಟ್ರಿಗೆ ಸಾರ್ವಜನಿಕರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಿಯಾದ ಮಾಹಿತಿ ಸಿಗದ ಆಶಾ ಕಾರ್ಯಕರ್ತೆಯರು ಆರೋಗ್ಯಾಧಿಕಾರಿಗಳ ಪರದಾಟವನ್ನು ಪಬ್ಲಿಕ್ ಕನ್ಮಡ ಖಾಸಗಿವಾಹಿನಿಯು ವರದಿ ಮಾಡಿದೆ.

ಸಾರ್ವಜನಿಕರಿಗೆ ಮಾರ್ಚ್ 1 ರಿಂದ ಕೊರೊನಾ ಲಸಿಕೆಯನ್ನು ವಿತರಿಸಲು ಆರೋಗ್ಯ ಇಲಾಖೆಯು ತಯಾರಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ಇಲಾಖೆ ನಿರ್ಧಾರ ಮಾಡಿದೆ.

ಸಾರ್ವಜನಿಕರು ಸರಿಯಾದ ಮಾಹಿತಿ ನೀಡ್ತಿಲ್ಲ

ರಾಜ್ಯದಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ಹಲವು ಕಾಯಿಲೆಯಿಂದ ಬಳಲುತ್ತಿರುವ ಜನ ಎಷ್ಟಿದ್ದಾರೆ ? ಎಷ್ಟು ವ್ಯಾಕ್ಸಿನ್ ಕೊಡಬೇಕು? ಫಲಾನುಭವಿಗಳು ಎಷ್ಟು ಮಂದಿ ಆಗುತ್ತಾರೆ ಎಂದು ತಿಳಿಯಲು ಸರ್ಕಾರ ಸರ್ವೇ ನಡೆಸುತ್ತಿದೆ.

ಈ ಸರ್ವೇಯನ್ನು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸ್ವಯಂ ಸೇವಕರು ನಡೆಸುತ್ತಿದ್ದಾರೆ. ಆದರೆ ಸರ್ವೇ ವೇಳೆ ಸಾರ್ವಜನಿಕರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಗ್ಯ ಸಿಬ್ಬಂದಿ ಜೊತೆ ಶನಿವಾರ ಕನ್ನಡ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ವಾಸ್ತವ ಬಯಲಾಗಿದೆ.

ಇದನ್ನೂ ಓದಿ | ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಪ್ಯಾಲೇಸ್ ಗುಟ್ಟಹಳ್ಳಿಯ ಜಟಕಾಸ್ಟಾಂಡ್ ವಸತಿ ಗೃಹದ ಸಂಕೀರ್ಣದ ಬಳಿ ಸುದ್ದಿವಾಹಿನಿ ಸರ್ವೇಗೆ ಇಳಿದಾಗ ಅಲ್ಲಿನ ಮನೆಯವರು ಸ್ಪಂದಿಸಿದ್ದಾರೆ. ಆರೋಗ್ಯ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ವ್ಯಾಕ್ಸಿನ್ ತೆಗೆದುಕೊಳ್ಳೋದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.

ಬಾಂಧವ್ಯ ನಗರದಲ್ಲಿ ಸರ್ವೆಗೆ ಅಂತಾ ಒಂದು ಮನೆಗೆ ಸುದ್ದಿವಾಹಿನಿ ತಂಡ ತೆರಳಿದೆ ಅಲ್ಲಿನ ನಿವಾಸಿ ನಿಮಗೆ ಎಷ್ಟು ವಯಸ್ಸು ಎಂದರೆ ಅವರು ಒಂದು ಬಾರಿ 49 ವರ್ಷ ಎನ್ನುತ್ತಾರೆ. ಮತ್ತೊಮ್ಮೆ 51 ವರ್ಷ ಎನ್ನುತ್ತಾರೆ.

ಮನೆಯಲ್ಲಿಯೇ ಇದ್ದ ಅವರು ಆಧಾರ್ ಕಾರ್ಡ್ ವೋಟರ್ ಐಡಿ ಕೇಳಿದ್ರೆ ಇಲ್ಲ ಅಂತಾರೆ. ವ್ಯಾಕ್ಸಿನ್ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಕೆಲವರು ನಾವು ಆರೋಗ್ಯವಾಗಿದ್ದು, ಲಸಿಕೆ ಬೇಡ ಅಂತ ಹೇಳುತ್ತಾರೆ ಎಂದು ವರದಿಯಲ್ಲಿ ಸುದ್ದಿವಾಹಿನಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version