ದಿನದ ಸುದ್ದಿ
‘ವಿನು ಸಾಗರ್ ಗ್ರೂಫ್’ ವತಿಯಿಂದ ಸಂತೇಬೆನ್ನೂರು ಪೋಲೀಸ್ ಠಾಣೆಯ ಸಿಬ್ದಂದಿಗಳಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ
ಸುದ್ದಿದಿನ,ಚನ್ನಗಿರಿ/ ಸಂತೇಬೆನ್ನೂರು : ಹಗಲು ಇರುಳೆನ್ನದೆ ಮಹಾಮಾರಿ ಕೊರೋನ ವಿರುದ್ದ ನಿರಂತರವಾಗಿ ತಮ್ಮಗಳ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಇಲ್ಲಿನ ಸಂತೇಬೆನ್ನೂರು ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ” ವಿನು ಸಾಗರ್ ಗ್ರೂಫ್ ಬೈರನಹಳ್ಳಿ” ವತಿಯಿಂದ 35 ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಠಾಣೆಯ ಉಪನಿರೀಕ್ಷಕರಾದ ಶಿವರುದ್ರಪ್ಪ ಎಸ್ ಮೇಟಿ ರವರಿಗೆ ನೀಡಿದರು.
ವಿನು ಸಾಗರ್ ಗ್ರೂಫ್ ಮತ್ತು ಗ್ರೂಪಿನ ಎಲ್ಲಾ ಸದಸ್ಯರನ್ನು ಪೋಲಿಸ್ ಇಲಾಖೆಯು ಅಭಿನಂದಿಸಿತು. ಈ ಸಂಧರ್ಭದಲ್ಲಿ ಪೋಲಿಸ್ ಉಪನಿರೀಕ್ಷಕರಾದ ಶಿವರುದ್ರಪ್ಪ.ಎಸ್ ಮೇಟಿ ಎಸ್ಐಗಳಾದ ವಿ.ರೇವಣಸಿದ್ದಪ್ಪ , ರಾಜಪ್ಪ . ಸುರೇಂದ್ರನಾಯ್ಕ , ಸಿಬ್ಬಂದಿಗಳಾದ ಪ್ರಕಾಶ್, ಯಶವಂತ , ಮಧು ಸೇರಿದಂತೆ ವಿನು ಸಾಗರ್ ಗ್ರೂಪಿನ ಸದಸ್ಯರುಗಳಾದ ಸಂದೀಪ್ ಬೈರನಹಳ್ಳಿ , ನವೀನ್ ಸಾಗರ್ ಶಿವರುದ್ರಪ್ಪ ಕರೇಕಟ್ಟೆ ಡಿಜಿ ಸುನಿಲ್. ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243